Advertisement

Ford Trophy: 103 ಎಸೆತಗಳಲ್ಲಿ ದ್ವಿಶತಕ… ಬೌಸ್‌ ದಾಖಲೆ

11:01 PM Oct 23, 2024 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ನ‌ ಬಿಗ್‌ ಹಿಟ್ಟಿಂಗ್‌ ಬ್ಯಾಟರ್‌ ಚಾಡ್‌ ಬೌಸ್‌ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ದ್ವಿಶತಕದ ದಾಖಲೆ ಸ್ಥಾಪಿಸಿದ್ದಾರೆ. ಅವರು ಕೇವಲ 103 ಎಸೆತಗಳಲ್ಲಿ 200 ರನ್‌ ಪೂರೈಸಿದರು.

Advertisement

“ಫೋರ್ಡ್‌ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕ್ಯಾಂಟರ್‌ಬರಿ ತಂಡದ ಸದಸ್ಯರಾಗಿರುವ ಚಾಡ್‌ ಬೌಸ್‌, ಒಟಾಗೊ ವಿರುದ್ಧ ಈ ದಾಖಲೆ ಸ್ಥಾಪಿಸಿದರು. ಹಿಂದಿನ ದಾಖಲೆ ಭಾರತದ ನಾರಾಯಣ್‌ ಜಗದೀಶನ್‌ ಮತ್ತು ಆಸ್ಟ್ರೇಲಿಯದ ಟ್ರ್ಯಾವಿಸ್‌ ಹೆಡ್‌ ಹೆಸರಲ್ಲಿತ್ತು. ಇವರು 114 ಎಸೆತಗಳಲ್ಲಿ ದ್ವಿಶತಕ ಹೊಡೆದಿದ್ದರು.

ಚಾಡ್‌ ಬೌಸ್‌ 110 ಎಸೆತಗಳಿಂದ 205 ರನ್‌ ಗಳಿಸಿ ಔಟಾದರು. ಸಿಡಿಸಿದ್ದು 27 ಬೌಂಡರಿ ಹಾಗೂ 7 ಸಿಕ್ಸರ್‌. ಇದು ಅವರ 100ನೇ ಲಿಸ್ಟ್‌ ಎ ಪಂದ್ಯವೆಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next