Advertisement

ನಮಾಮಿ ಗಂಗೆ ಯೋಜನೆಗೆ ಚಾಚಾ ಚೌಧರಿ ಲಾಂಛನ

11:13 PM Oct 02, 2021 | Team Udayavani |

ನವದೆಹಲಿ: ಗಂಗಾನದಿ ಶುದ್ಧೀಕರಣ ಯೋಜನೆ “ನಮಾಮಿ ಗಂಗೆ ಯೋಜನೆ’ ಲಾಂಛನವನ್ನಾಗಿ ಕಾಮಿಕ್‌ ಪಾತ್ರ “ಚಾಚಾ ಚೌಧರಿ’ಯನ್ನು ಬಳಕೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

Advertisement

ಈ ಕ್ರಮದ ಮೂಲಕ ಯೋಜನೆಯಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಕಾಮಿಕ್‌ ಪುಸ್ತಕಗಳ ಪ್ರಕಾಶನ ಸಂಸ್ಥೆ ಡೈಮಂಡ್‌ ಟೂನ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಾಚಾ ಚೌಧರಿ ಹೆಸರಿನಲ್ಲಿ ಗಂಗಾ ನದಿ ರಕ್ಷಣೆಗಾಗಿ ಇ- ಕಾಮಿಕ್ಸ್‌ಗಳು, ಆ್ಯನಿಮೇಷನ್‌ ವಿಡಿಯೋಗಳು, ಚಿತ್ರಗಳನ್ನು ಸಿದ್ಧಪಡಿಸಲಿದೆ ಎಂದು ಯೋಜನೆಯ ಪ್ರಧಾನ ನಿರ್ದೇಶಕ ರಾಜೀವ್‌ ರಂಜನ್‌ ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ:ಹತ್ತು ತಾಸುಗಳ ಸುದೀರ್ಘ ಮೆರವಣಿಗೆ ನಂತರ ಹಿಂದೂ ಮಹಾಗಣಪತಿ ವಿಸರ್ಜನೆ

ಗಂಗಾ ನದಿ ಶುದ್ಧೀಕರಣ ಯೋಜನೆ ಬಗ್ಗೆ ಈಗಾಗಲೇ ಹಲವು ಟಿವಿ ಕಾರ್ಯ ಕ್ರಮಗಳು ಪ್ರಸಾರವಾಗುತ್ತಿವೆ. ಅದೇ ರೀತಿ “ಗಂಗಾ ಕೀ ಬಾತ್‌, ಚಾಚಾ ಚೌಧರಿ ಕೆ ಸಾಥ್‌’ ಹೆಸರಿನ ಲ್ಲಿಯೂ ಕಾರ್ಯಕ್ರಮ ನಡೆಸಲಾಗುವುದು. ಅದ ರಲ್ಲಿ ಕಾಮಿ ಕ್‌ ಚಾಚಾ ಚೌಧರಿ ಮೂಲಕ ನದಿಗಳ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದಿದ್ದಾರೆ ಮಿಶ್ರಾ

Advertisement

Udayavani is now on Telegram. Click here to join our channel and stay updated with the latest news.

Next