Advertisement

ಚಾಬಹಾರ್‌ ಬಂದರು ಅಭಿವೃದ್ದಿ; ಭಾರತಕ್ಕೆ ಅಮೆರಿಕ ನಿಷೇಧ ರಿಯಾಯಿತಿ

10:46 AM Nov 07, 2018 | Team Udayavani |

ವಾಷಿಂಗ್ಟನ್‌ : ಜಾಗತಿಕ ವಾಣಿಜ್ಯ ರಂಗದಿಂದ ಇರಾನನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಅದರ ಮೇಲೆ ವ್ಯಾಪಕ ಬಿಗಿ ನಿಷೇಧಗಳನ್ನು ಹೇರಿರುವ ಅಮೆರಿಕ, ಇರಾನ್‌ ನಲ್ಲಿನ ಚಾಬಹಾರ್‌ ಬಂದರಿನ ಅಭಿವೃದ್ದಿಗಾಗಿ ಭಾರತಕ್ಕೆ ನಿಷೇಧದಿಂದ ಕೆಲವೊಂದು ರಿಯಾಯಿತಿಗಳನ್ನು ನೀಡಿದೆ.

Advertisement

ಗಲ್ಫ್ ಆಪ್‌ ಓಮಾನ್‌ ನಲ್ಲಿನ ಚಾಬಹಾರ್‌ ಬಂದರನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತ ವಹಿಸಿರುವ ಮಹತ್ತರ ಪಾತ್ರವನ್ನು ವಾಷಿಂಗ್ಟನ್‌ ಮಾನ್ಯ ಮಾಡಿರುವುದಕ್ಕೆ ಅಮೆರಿಕದ ಈ ರಿಯಾಯಿತಿ ಸಾಕ್ಷಿಯಾಗಿದೆ. 

ಇದು ಮಾತ್ರವಲ್ಲದೆ ಈ ಬಂದರನ್ನು ಅಫ್ಘಾನಿಸ್ಥಾನವನ್ನು ಜೋಡಿಸುವಲ್ಲಿ ಭಾರತ ಕೈಗೊಂಡಿರುವ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೂ ಅಮೆರಿಕ ಭಾರತಕ್ಕೆ ನಿಷೇಧದಿಂದ ಕೆಲವು ರಿಯಾಯಿತಿಗಳನ್ನು ನೀಡಿದೆ.

ಇರಾನ್‌ ಮೇಲಿನ ಅಮೆರಿಕದ ಕಟ್ಟು ನಿಟ್ಟಿನ ನಿಷೇಧಗಳು ಜಾರಿಗೆ ಬಂದ ಒಂದು ದಿನದ ತರುವಾಯ ವಾಷಿಂಗ್ಟನ್‌, ಭಾರತಕ್ಕೆ ನೀಡಿರುವ ನಿಷೇದ-ರಿಯಾಯಿತಿಗಳು ಟ್ರಂಪ್‌ ಆಡಳಿತೆಯ ಅತ್ಯಾಶ್ಚರ್ಯದ ಕ್ರಮವೆಂದು ವಿಶ್ಲೇಷಕರಿಂದ  ಪರಿಗಣಿತವಾಗಿದೆ. 

ಸಮರ ತ್ರಸ್ತ ಅಫ್ಘಾನಿಸ್ಥಾನವನ್ನು ಅಭಿವೃದ್ಧಿಪಡಿಸುವ ದಿಶೆಯಲ್ಲಿ ಇರಾನ್‌ನಲ್ಲಿನ ಚಾಬಹಾರ್‌ ಬಂದರು ಅಮೆರಿಕ ಮತ್ತು ಭಾರತಕ್ಕೆ ಅತ್ಯಂತ ವ್ಯೂಹಾತ್ಮಕ ಮಹತ್ವದ ಬಂದರು ಆಗಿರುವುದೇ ವಾಷಿಂಗ್ಟನ್‌ ನಿಷೇಧ-ರಿಯಾಯಿತಿಗೆ ಕಾರಣವೆಂದು ತಿಳಿಯಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next