Advertisement

ಪೊಲೀಸ್‌ ಮಾಹಿತಿದಾರರೆಂಬ ಶಂಕೆ: ಮಾವೋ ಉಗ್ರರಿಂದ ಇಬ್ಬರು ಗ್ರಾಮಸ್ಥರ ಹತ್ಯೆ

09:56 AM May 03, 2019 | Sathish malya |

ಸುಕ್‌ಮಾ, ಛತ್ತೀಸ್‌ಗಢ : ಪೊಲೀಸ್‌ ಮಾಹಿತಿದಾರರೆಂಬ ಶಂಕೆಯಲ್ಲಿ ಮಾವೋ ಉಗ್ರರು ಇಬ್ಬರು ಗ್ರಾಮಸ್ಥರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಾವೋ ಉಗ್ರರಿಂದ ಈ ಎರಡು ಹತ್ಯೆಗಳು ನಿನ್ನೆ ಬುಧವಾರ ಕಿಸ್ತಾರಾಮ್‌ ಪೊಲೀಸ್‌ ಠಾಣೆ ವ್ಯಾಪ್ತಿಯಡಿಯ ಕರಿಗುಂಡಂ ಗ್ರಾಮದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹತ ಗ್ರಾಮಸ್ಥರಿಬ್ಬರನ್ನು ಪೊಡಿಯಾಮ ಮುತ್ತ ಮತ್ತು ಕೊಕೊ ಲಚ್ಚು ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ನಿನ್ನೆ ಬುಧವಾರ ಮಧ್ಯಾಹ್ನ ರಾಯಪುರದಿಂದ ಸುಮಾರು 500 ಕಿ.ಮೀ. ದೂರವಿರುವ ಕರಿಗುಂಡಂ ಗ್ರಾಮಕ್ಕೆ ಬಂದ ಸಶಸ್ತ್ರ ಮಾವೋ ಉಗ್ರರು, ಗ್ರಾಮಸ್ಥರಾದ ಮುತ್ತ ಮತ್ತು ಲಚ್ಚುವಿಗೆ ಚಿತ್ರಹಿಂಸೆ ನೀಡಿ ಸಾಯಿಸಿದರು ಎಂದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next