ನವದೆಹಲಿ: ಗುಮ್ನಾನಿ ಬಾಬಾ ಅವರೇ ನೇತಾಜಿ ಸುಭಾಶ್ಚಂದ್ರ ಬೋಸ್ ಹೌದೋ ಅಲ್ಲವೋ ಎಂದು ತಿಳಿಯಲು ನಡೆಸಿದ್ದ ಡಿಎನ್‌ಎ ಮಾದರಿ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡಬೇಕು ಎಂಬ ಕೋರಿಕೆ ಅರ್ಜಿ ತಿರಸ್ಕೃತಗೊಂಡಿದೆ.
ಕೇಂದ್ರ ಗೃಹ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ವಿಧಿ-ವಿಜ್ಞಾನ ಪ್ರಯೋಗಾಲಯ ಈ ತೀರ್ಮಾನ ಪ್ರಕಟಿಸಿದೆ.
ಪಶ್ಚಿಮ ಬಂಗಾಳದ ಹೂಗ್ಲಿಯ ಕೊನ್ನಾಗರ್ ನಿವಾಸಿ ಸಯಾಕ್ ಸೆನ್ ಎಂಬುವರು ಮಾಹಿಕಿ ಹಕ್ಕು ಕಾಯ್ದೆಯ ಅನ್ವಯ ಮಾಹಿತಿ ಕೋರಿ ಆರ್ಜಿ ಸಲ್ಲಿಸಿದ್ದರು.
ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)ರ ಅಡಿ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಯೋಗಾಲಯ ತಿಳಿಸಿದೆ.
ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)ರ ಪ್ರಕಾರ ದೇಶದ ಸಾರ್ವಭೌಮತ್ವ, ಸಮಗ್ರತೆ, ಭದ್ರತೆ, ಕಾರ್ಯತಂತ್ರ, ಆರ್ಥಿಕ ಹಿತಾಸಕ್ತಿಗಳಿಗೆ ಪೂರ್ವಾಗ್ರಹ ಪರಿಣಾಮ ಬೀರುವ ಮಾಹಿತಿಗಳನ್ನು ಹಂಚಿಕೊಳ್ಳುವಂತಿಲ್ಲ. ಸಯಾಕ್ ಸೆನ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.