ಗಂಗಾವತಿ : 2022-23 ಸಾಲಿನ ವೃತ್ತಿಪರ ಕೋರ್ಸ್ ಗಳನ್ನು ಪ್ರವೇಶ ಮಾಡುವ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ದಿನಾಂಕ ಘೋಷಣೆಯಾಗಿದ್ದು ಆ.27 ರಿಂದ ದಾಖಲಾತಿಗಳ ಪರಿಶೀಲನೆ ಕಾರ್ಯ ರ್ಯಾಂಕ್ ಪ್ರಕಾರ ಆರಂಭ ವಾಗಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಘಟಕ ಅವೈಜ್ಞಾನಿಕ ನಿಯಮಗಳನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳು 1 ರಿಂದ 10 ತರಗತಿ ಓದಿದ ತಾಲ್ಲೂಕಿನ ವ್ಯಾಪ್ತಿಯಲ್ಲಿ ದಾಖಲಾತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪರಿಶೀಲನೆ ಮಾಡಿಸುವಂತೆ ನಿಯಮದಲ್ಲಿ ಸೂಚನೆ ನೀಡಲಾಗಿದ್ದು ಇದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತೊಂದರೆಯಾಗಿದೆ .
ಈ ಮುಂಚೆ ವಿದ್ಯಾರ್ಥಿ ಪಾಲಕರು ವಾಸಮಾಡುವ ತಾಲ್ಲೂಕು ಅಥವಾ ಜಿಲ್ಲಾ ವ್ಯಾಪ್ತಿಯಲ್ಲಿಯೇ ವೃತ್ತಿಪರ ಕೋರ್ಸ್ ಗಳಿಗೆ ತೆರಳುವ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿತ್ತು ಈ ವರ್ಷದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಘಟಕ 1 ರಿಂದ 10 ನೇ ತರಗತಿಯವನು ಯಾವ ತಾಲ್ಲೂಕಿನಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೋ ಆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 1ರಿಂದ ಪಿಯುಸಿವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡಿಸುವಂತೆ ಸೂಚನೆ ನೀಡಲಾಗಿದೆ .ಪಾಲಕರು ತಮ್ಮ ಮಕ್ಕಳನ್ನು ಅನ್ಯ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಟಿಎ ನಿಯಮದಿಂದಾಗಿ ಪಾಲಕರು ವಿದ್ಯಾರ್ಥಿಗಳ ಜತೆ ಅನ್ಯ ಊರುಗಳಿಗೆ ತೆರಳಿ ದಾಖಲಾತಿಗಳನ್ನು ಪರಿಶೀಲನೆ ಮಾಡಿಸುವ ಸ್ಥಿತಿ ಉಂಟಾಗಿದೆ.
ಈ ಮೊದಲಿನಂತೆ ಪಾಲಕರ ವಾಸಮಾಡಿರುವ ತಾಲ್ಲೂಕಿನಲ್ಲೇ ಸಿಇಟಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪರಿಶೀಲನ ನಡೆಸಿದೆ ಅನುಕೂಲವಾಗುತ್ತದೆ ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ. 1 ರಿಂದ 7 ತರಗತಿಯ ದಾಖಲಾತಿಗಳನ್ನು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು ಆಗಿರುವುದರಿಂದ ಕೆಲ ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಸಾಮಾನ್ಯವಾಗಿ ಐದನೇ ತರಗತಿಯ ನಂತರ ಅನೇಕ ಊರುಗಳಲ್ಲಿ ಮಕ್ಕಳನ್ನು ಓದಿಸುವ ಪಾಲಕರೇ ಹೆಚ್ಚು ಇರುತ್ತಾರೆ ಈ ಮಧ್ಯೆ ಪ್ರಾಧಿಕಾರದ ನಿಯಮದಿಂದ ವಿದ್ಯಾರ್ಥಿಗಳು ಪಾಲಕರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಊರುಗಳಿಗೆ ಅಲೆದಾಡುವಂತಾಗಿದೆ . ವಿದ್ಯಾರ್ಥಿಗಳು ಪಾಲಕರು ವಾಸ ಮಾಡುವ ಆಯಾ ತಾಲ್ಲೂಕಿನಲ್ಲಿಯೇ ಸಿಇಟಿ ದಾಖಲಾತಿಗಳ ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡುವಂತೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಎಸ್ಸಿ ಮೀಸಲಾತಿ ದುರುಪಯೋಗ ಖಂಡಿಸಿ ಬೀದಿಗೆ ಬಂದ ದೇವತೆಗಳು!