Advertisement

29, 30ಕ್ಕೆ ಸಿಇಟಿ ಫ‌ಲಿತಾಂಶ?

08:45 PM Jul 24, 2022 | Team Udayavani |

ಬೆಂಗಳೂರು: ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫ‌ಲಿತಾಂಶ ಪ್ರಕಟವಾದ ಬೆನ್ನಲ್ಲೇ ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2022-23ನೇ ಸಾಲಿನ ರಾಜ್ಯ ಸಿಇಟಿ ಫ‌ಲಿತಾಂಶ ನೀಡಲು ಸಿದ್ಧತೆ ನಡೆಸಿದ್ದು, ಜು.29 ಅಥವಾ 30ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ.

Advertisement

ಸಿಬಿಎಸ್‌ಇ 12ನೇ ತರಗತಿ ಫ‌ಲಿತಾಂಶ ಒಂದು ದಿನದ ಹಿಂದಷ್ಟೆ ಪ್ರಕಟವಾಗಿದೆ. ಐಸಿಎಸ್‌ಇ 12ನೇ ತರಗತಿ ಫ‌ಲಿತಾಂಶ ಭಾನುವಾರ ಬಿಡುಗಡೆಯಾಗಿದೆ. ಸಿಬಿಎಸ್‌ಇ, ಐಸಿಎಸ್‌ಇನಲ್ಲಿ ಪಡೆದಿರುವ ಫ‌ಲಿತಾಂಶದ ವಿಜ್ಞಾನ ವಿಷಯಗಳ ಶೇ.50ರಷ್ಟು ಅಂಕಗಳನ್ನು ಸಿಇಟಿ ಫ‌ಲಿತಾಂಶಕ್ಕೆ ಜೋಡಿಸಿ ರ್‍ಯಾಂಕ್‌ ಲಿಸ್ಟ್‌ ತಯಾರಿಸಲಾಗುತ್ತದೆ. ಇದಕ್ಕೆ 3-4 ದಿನ ಕಾಲಾವಕಾಶ ಬೇಕಾಗುತ್ತದೆ. ಅಂದುಕೊಂಡಂತೆ ಎಲ್ಲ ಸಿದ್ಧತೆಗಳಾದರೆ ಮೇ 29 ಅಥವಾ 30ರಂದು ಫ‌ಲಿತಾಂಶ ಪ್ರಕಟಿಸಲಾಗುವುದು ಎಂದು ಕೆಇಎ ಮೂಲಗಳು ತಿಳಿಸಿವೆ.

ಜೂನ್‌ 16ರಿಂದ 18ರವರೆಗೆ ನಡೆದಿದ್ದ ಸಿಇಟಿ ಫ‌ಲಿತಾಂಶವನ್ನು ಜು.17ಕ್ಕೆ ಪ್ರಕಟಿಸುವುದಾಗಿ ಹೇಳಿತ್ತು. ಅದರಂತೆ ಫ‌ಲಿತಾಂಶ ಪ್ರಕಟಿಸಲು ಕೆಇಎ ಸಿದ್ಧವಿದ್ದರೂ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಫ‌ಲಿತಾಂಶಗಳು ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫ‌ಲಿತಾಂಶ ಪ್ರಕಟಿಸಲು ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next