Advertisement

ಸಿಇಟಿ ಫಲಿತಾಂಶ ಪ್ರಕಟ : ರ್‍ಯಾಂಕ್‌ಗಳಲ್ಲಿ ಬಹುಪಾಲು ಬೆಂಗಳೂರಿಗೆ

12:29 PM May 26, 2019 | Team Udayavani |

ಬೆಂಗಳೂರು: 2019 ನೇ ಸಾಲಿನ ಸಿಇಟಿ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು , ಇಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಜಫಿನ್‌ ಬಿಜು ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಆರ್‌ ಚಿನ್ಮಯ್‌ 2 ನೇ ರ್‍ಯಾಂಕ್‌ ಪಡೆದಿದ್ದಾರೆ.

Advertisement

ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಫ‌ಲಿತಾಂಶವನ್ನು ಬಿಡಗುಡೆ ಗೊಳಿಸಿದರು. ಟಾಪ್‌ 5 ರ್‍ಯಾಂಕ್‌ ಪಡೆದವರಿಗೆ ಉಚಿತ ಪ್ರವೇಶ ಎಂದು ಘೋಷಿಸಿದ್ದಾರೆ.

ಇಂಜಿನಿಯರಿಂಗ್‌ ವಿಭಾಗ
ಜಫಿನ್‌ ಬಿಜು-ಮೊದಲ ರ್‍ಯಾಂಕ್‌ – ಚೈತನ್ಯ ಟೆಕ್ನೋ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು.
ಮೊದಲ ಹತ್ತು ಸ್ಥಾನಗಳಲ್ಲಿ 7 ಬೆಂಗಳೂರು, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಲಭಿಸಿದೆ.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ

ಪಿ ಮಹೇಶ್‌ ಆನಂದ್‌- ಚೈತನ್ಯ ಟೆಕ್ನೋ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು ಮೊದಲ ರ್‍ಯಾಂಕ್‌.

Advertisement

ಮೊದಲ ಹತ್ತು ಸ್ಥಾನಗಳಲ್ಲಿ 6 ಬೆಂಗಳೂರು, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಮೈಸೂರಿಗೆ ಮತ್ತು 1 ಸ್ಥಾನ ದಾವಣಗೆರೆಗೆ ಲಭಿಸಿದೆ.

ಬಿಎಸ್ಸಿ ಕೃಷಿ 

ಕೀರ್ತನಾ ಎಂ.ಗೆ ಮೊದಲ ರ್‍ಯಾಂಕ್‌ – ಅರುಣ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಬೆಂಗಳೂರು.

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 03, ಮಂಗಳೂರಿಗೆ 04, ಮೈಸೂರಿಗೆ 01, ಹಾಸನಕ್ಕೆ 01, ಶಿವಮೊಗ್ಗಕ್ಕೆ 01 ಸ್ಥಾನ ದೊರಕಿದೆ.

ಪಶುವೈದ್ಯಕೀಯ 

ಪಿ ಮಹೇಶ್‌ ಆನಂದ್‌ -ಚೈತನ್ಯ ಟೆಕ್ನೊ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು . ಮೊದಲ ರ್‍ಯಾಂಕ್‌

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 08, ಮೈಸೂರಿಗೆ 01, ದಾವಣಗೆರೆಗೆ 01 ಸ್ಥಾನ ಬಂದಿರುತ್ತದೆ.

ಬಿ ಫಾರ್ಮಾ ಮತ್ತು ಫಾರ್ಮಾ ಡಿ

ಕು.ಸಾಯಿ ಸಾಕೇತಿಕ ಚಕುರಿ. ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು . ಮೊದಲ ರ್‍ಯಾಂಕ್‌

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 07, ಮೈಸೂರಿಗೆ 01, ಬಳ್ಳಾರಿಗೆ01 ಸ್ಥಾನ ಬಂದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next