* ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ರ್‍ಯಾಂಕ್ ಕೇವಲ ಎಂಜಿನಿಯರಿಂಗ್ ಸೀಟಿಗೆ ಸೀಮಿತವಾಗಿರದೆ, ಅಭ್ಯರ್ಥಿಗಳ ಆಯ್ಕೆಯಂತೆ ವಿವಿಧ ಬಿ.ಎಸ್ಸಿ, ಬಿ.ಟೆಕ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
* ಸಿಇಟಿ ನಡೆಸುವುದು ಎಂಜಿನಿಯರಿಂಗ್ ಸೀಟು ಹಂಚಿಕೆಗೆ ಮಾತ್ರವಲ್ಲ. ಅದರ ಜತೆಗೆ ಇನ್ನು ಹಲವು ಕೋರ್ಸ್‌ಗಳ ಸೀಟು ಹಂಚಿಕೆಯನ್ನು ಸಿಇಟಿ ರ್‍ಯಾಂಕ್ ಆಧಾರದಲ್ಲೇ ನಡೆಸಲಾಗುತ್ತದೆ.
* ರಾಜ್ಯದ ಸರ್ಕಾರಿ, ವಿಶ್ವವಿದ್ಯಾಲಯ, ಖಾಸಗಿ ಅನುದಾನಿತ, ಅನುದಾನ ರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಎಂಜಿನಿಯರಿಂಗ್, ತಂತ್ರಜ್ಞಾನ, ಕೃಷಿ ವಿಜ್ಞಾನದ ಕೋರ್ಸ್‌ಗಳಾದ ಬಿ.ವಿ.ಎಸ್ಸಿ ಹಾಗೂ ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಬಿ.ಎಸ್ಸಿ (ಆನರ್ಸ್)-ಕೃಷಿ, ಅರಣ್ಯ ವಿಜ್ಞಾನ, ಬಿ.ಎಸ್ಸಿ(ಆನರ್ಸ್) ರೇಷ್ಮೆ ಕೃಷಿ, ಬಿ.ಎಸ್ಸಿ (ಆನರ್ಸ್) ತೋಟಗಾರಿಕೆ, ಬಿಎಸ್ಸಿ (ಆನರ್ಸ್) ಕೃಷಿ ಜೈವಿಕ ತಂತ್ರಜ್ಞಾನ, ಬಿ.ಎಸ್ಸಿ (ಆನರ್ಸ್)ಸಮುದಾಯ ವಿಜ್ಞಾನ, ಬಿ.ಟೆಕ್-ಕೃಷಿ ಎಂಜಿನಿಯರಿಂಗ್, ಬಿ.ಟೆಕ್ -ಬಯೊ ಟೆಕ್ನಾಲಜಿ, ಬಿ.ಟೆಕ್- ಹೈನುಗಾರಿಕೆ ತಂತ್ರಜ್ಞಾನ, ಬಿಎಫ್ಎಸ್ಸಿ-ಮೀನುಗಾರಿಕೆ, ಬಿ.ಟೆಕ್-ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಬಿಎಸ್ಸಿ- ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಬಿ-ಫಾರ್ಮಾ, ಡಿ-ಫಾರ್ಮ ಕೋರ್ಸುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟದ ಸೀಟುಗಳಿಗೆ ಮೊದಲ ವರ್ಷದ ಮೊದಲ ಸೆಮಿಸ್ಟರ್‌ಗೆ ಹಂಚಿಕೆ ಮಾಡಲಾಗುತ್ತದೆ.
* ಸಿಇಟಿ ರ್‍ಯಾಂಕಿಂಗ್ ಆಧಾರದಲ್ಲಿ ಈ ಎಲ್ಲ ಕೋರ್ಸ್‌ಗಳ ಸೀಟು ಹಂಚಿಕೆ ನಡೆಯುವುದರಿಂದ ಎಂಜಿನಿಯರಿಂಗ್ ಸೀಟು ಕೈ ತಪ್ಪಿದ ಮಾತ್ರಕ್ಕೆ ಸಿಇಟಿ ಬರೆದಿರುವುದು ವ್ಯರ್ಥವಾಯಿತು ಎಂದುಕೊಳ್ಳುವ ಅಗತ್ಯವಿಲ್ಲ. ಎಂಜಿನಿಯರಿಂಗ್ ಹೊರತಾಗಿಯೂ ಹಲವು ಕೋರ್ಸ್‌ಗಳಿಗೆ ಸಿಇಟಿ ರ್‍ಯಾಂಕ್ ಆಧಾರದಲ್ಲಿ ಸೀಟು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ.
* ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಕೃಷಿಕ ಕುಟುಂಬದ ಕೋಟದ ಅಡಿ ಸೀಟು ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಕೃಷಿಗೆ ಸಂಬಂಧಿಸಿದಂತೆ ಮಾದರಿಗಳನ್ನು ಗುರುತಿಸಲು ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಅದರಲ್ಲಿ ಉತ್ತಮ ಅಂಕ ಪಡೆದರೆ, ಸುಲಭವಾಗಿ ಕೃಷಿ ವಿಜ್ಞಾನ ಸೀಟು ಪಡೆಯಬಹುದಾಗಿದೆ.