Advertisement

ಇಂದಿನಿಂದ ಸಿಇಟಿ ಅರ್ಜಿ ಸಲ್ಲಿಕೆ ಆರಂಭ, ಮೇ 5 ಕೊನೇ ದಿನ

08:34 PM Apr 17, 2022 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎ. 18ರಿಂದ ಆರಂಭವಾಗಲಿದೆ.

Advertisement

ಸೋಮವಾರ ಬೆಳಗ್ಗೆ 11 ಗಂಟೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೇ 5ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಬಹಳ ಸುಲಭಗೊಳಿಸಲಾಗಿದೆ. ಎಸೆಸೆಲ್ಸಿ ನೋಂದಣಿ ಸಂಖ್ಯೆಯನ್ನು ಅಪ್‌ಲೋಡ್‌ ಮಾಡಿದರೆ, ವಿದ್ಯಾರ್ಥಿ ಹೆಸರು, ತಂದೆ-ತಾಯಿ ಹೆಸರು ಯಾಂತ್ರಿಕವಾಗಿ ಅಪ್‌ಲೋಡ್‌ ಆಗಲಿದೆ. ಉಳಿದಂತೆ ವಿದ್ಯಾರ್ಥಿಯು 1ರಿಂದ 12ನೇ ತರಗತಿ ವರೆಗೆ ಎಲ್ಲೆಲ್ಲಿ? ವಿದ್ಯಾಭ್ಯಾಸ ಮಾಡಿದ್ದಾರೆ ಎಂಬ ಮಾಹಿತಿ ಹಾಗೂ ಮೀಸಲಾತಿ ಸಂಬಂಧಿಸಿದ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದರೆ ಸಾಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದ್ದಾರೆ.

ಮೂಲ ದಾಖಲೆ ಅಗತ್ಯವಿಲ್ಲ
ಇದೇ 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಒತ್ತಡವಾಗದಿರಲಿ ಎಂಬ ಕಾರಣದಿಂದ ಮೀಸಲಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಲ್ಲಿಸುವ ನಿಯಮವನ್ನು ಸಡಿಲಗೊಳಿಸಲಾಗಿದೆ. ಅರ್ಜಿ ಸಲ್ಲಿಸುವ ವೇಳೆ ಮೀಸಲಾತಿಗೆ ಸಂಬಂಧಿಸಿದ ಜಾತಿ, ಗ್ರಾಮೀಣ ವಿದ್ಯಾರ್ಥಿ, ಕನ್ನಡ ಮಾಧ್ಯಮ, ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಮಾಹಿತಿಗಳನ್ನು (ಹೌದು ಅಥವಾ ಇಲ್ಲ) ಅಪ್‌ಲೋಡ್‌ ಮಾಡಿದರೆ ಸಾಕು. ಮೂಲ ದಾಖಲೆಗಳನ್ನು ದಾಖಲಾತಿ ಪರಿಶೀಲನೆ ವೇಳೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಪ್ರಕ್ರಿಯೆ ಸುಲಭ
ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಮಾಹಿತಿ ನೀಡುವುದಕ್ಕಾಗಿ ವೀಡಿಯೋ ಮಾರ್ಗದರ್ಶನ ಮಾಡಲಾಗುತ್ತಿದೆ. ಕೆಇಎ ವೆಬ್‌ಸೈಟ್‌ನಲ್ಲಿ ಸೋಮವಾರ ಬೆಳಗ್ಗೆ ವೀಡಿಯೋ ಅಪ್‌ಲೋಡ್‌ ಮಾಡಲಾಗುತ್ತದೆ. ವೀಡಿಯೋ ನೋಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದೇ ರೀತಿ ಶುಲ್ಕವನ್ನು ಪೋನ್‌ ಪೇ, ಗೂಗಲ್‌ ಪೇ ಮೂಲಕವೂ ಪಾವತಿ ಮಾಡಬಹುದುದಾಗಿದೆ ಎಂದು ನಿರ್ದೇಶಕಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next