Advertisement
ಶುಕ್ರವಾರ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ್ದು, ಕಾಲೇಜು ಪ್ರವೇಶ ಪಡೆದು ಕೊಳ್ಳಲು ಡಿ. 30 ಕೊನೆಯ ದಿನವಾಗಿದೆ.
ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ವಿವರವನ್ನು ಡಿ. 24ರ ಬೆಳಗ್ಗೆ 11ಕ್ಕೆ ಪ್ರಕಟಿಸಲಾಗಿದೆ. ತಮಗೆ ದೊರೆತಿರುವ ಸೀಟು ಬೇಡವಾದರೆ, ಡಿ. 25ರ ಸಂಜೆ 5 ಗಂಟೆಯೊಳಗೆ ರದ್ದುಪಡಿಸಬಹುದು. ಅಭ್ಯರ್ಥಿಗಳು ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಾಯಿಸಲು, ಸೇರಿಸಲು ಮತ್ತು ತೆಗೆದು ಹಾಕಲು ಡಿ. 26ರ ವರೆಗೆ ಸಮಯ ನೀಡಲಾಗಿದೆ. ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಡಿ. 27ರ ಸಂಜೆ 6ಕ್ಕೆ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಶುಲ್ಕ ಪಾವತಿಸುವುದು ಮತ್ತು ಪ್ರವೇಶ ಪತ್ರವನ್ನು ಡಿ. 28 ಮತ್ತು 29ರಂದು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಡಿ. 30ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
Related Articles
Advertisement
ರದ್ದುಪಡಿಸಲೂ ಅವಕಾಶವಿದೆಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆ ಬಳಿಕ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಆಯ್ಕೆಯನ್ನು ಪರಿಗಣಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಅಭ್ಯರ್ಥಿಯ ಎರಡನೇ ಮುಂದುವರಿದ ಸುತ್ತಿನಲ್ಲಿ ಹಂಚಿಕೆ ಯಾಗುವ ಸೀಟಿಗೆ ಶುಲ್ಕವನ್ನು ಪಾವತಿಸಿ ನಿಗದಿತ ಅವಧಿಯಲ್ಲಿ ಕಾಲೇಜಿನಲ್ಲಿ ಕಡ್ಡಾಯವಾಗಿ ಪ್ರವೇಶ ಪಡೆದುಕೊಳ್ಳಬೇಕು. ಒಂದು ವೇಳೆ ಅಭ್ಯರ್ಥಿಗಳು ಮೊದಲನೇ ಸುತ್ತಿನಲ್ಲಿ ಅಥವಾ ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು ಇಷ್ಟವಾಗದಿದ್ದಲ್ಲಿ ಡಿ. 25ರ ಸಂಜೆ 5ರೊಳಗೆ ರದ್ದುಪಡಿಸಬಹುದು. ಅಂತಹ ಅಭ್ಯರ್ಥಿಗಳಿಗೆ ಈಗಾಗಲೇ ಪಾವತಿಸಿರುವ ಶುಲ್ಕದಲ್ಲಿ 5 ಸಾವಿರ ರೂ.ಗಳನ್ನು ಕಡಿದುಕೊಂಡು ಉಳಿದ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಸೀಟು ಪಡೆಯದಿದ್ದರೆ ಕಾನೂನು ಕ್ರಮ
ಒಂದು ವೇಳೆ ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಯ ಬಳಿಕ ಹಂಚಿಕೆಯಾದ ಸೀಟಿಗೆ ಪ್ರವೇಶಾತಿ ಪಡೆಯದಿದ್ದಲ್ಲಿ, ಅಂತಹ ಅಭ್ಯರ್ಥಿ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರಗಿಸಲಾಗುತ್ತದೆ ಎಂದು ಕೆಇಎ ಎಚ್ಚರಿಕೆ ನೀಡಿದೆ.