Advertisement

2021-22ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ರಾಂಕ್ ಬಂದವರ ವಿವರ

11:03 AM Jul 30, 2022 | Team Udayavani |

ಬೆಂಗಳೂರು: ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2021-22ನೇ ಸಾಲಿನ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ ನಾರಾಯಣ ಅವರು ಫಲಿತಾಂಶ ಪ್ರಕಟಿಸಿದರು.

Advertisement

ಈ ಸಾಲಿನಲ್ಲಿ 2,16,559 ಮಂದಿ ಸಿಇಟಿ ಪರೀಕ್ಷೆಗೆ ನೋಂದಣಿಯಾಗಿದ್ದರು. ಅವರಲ್ಲಿ 2,10,829 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 101990 ವಿದ್ಯಾರ್ಥಿಗಳು ಮತ್ತು 108839 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.

ಈ ಬಾರಿ ಇಂಜಿನಿಯರಿಂಗ್ ವಿಭಾಗದಲ್ಲಿ 1,08,698 ಸೀಟುಗಳಿದ್ದು, ಇದರಲ್ಲಿ ಸರ್ಕಾರಿ ಕೋಟಾದಲ್ಲಿ ಸುಮಾರು 57 ಸಾವಿರ+ ಸೀಟುಗಳು ಸಿಗಲಿವೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಆರಂಭವಾಗಲಿದ್ದು, ಆನ್ ಲೈನ್ ಮೂಲಕವೇ ಈ ಬಾರಿ ದಾಖಲಾತಿ ಪರಿಶೀಲನೆ ನಡೆಯಲಿದೆ.

ಈ ಬಾರಿ ಸಿಇಟಿಯಲ್ಲಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತ – 5 ಅಂಕ, ರಸಾಯನಶಾಸ್ತ್ರ -1 ಅಂಕ, ಭೌತಶಾಸ್ತ್ರದಲ್ಲಿ 1 ಅಂಕ ಗ್ರೇಸ್ ನೀಡಲಾಗಿದೆ.

ಇಂಜಿನಿಯರ್ ಗೆ – 1,71,656 ರಾಂಕ್, ಕೃಷಿ ಕೋರ್ಸ್- 1,39,968 ರಾಂಕ್, ಪಶುಸಂಗೋಪನೆ- 1,42,820, ಯೋಗ ಮತ್ತು ನ್ಯಾಚುರೋಪತಿ- 1,42,750, ಬಿ ಫಾರ್ಮ್ ನಲ್ಲಿ 1,74,568 ರಾಂಕ್ ನೀಡಲಾಗಿದೆ.

Advertisement

ರಾಂಕ್ ಬಂದವರ ವಿವರ

ಎಂಜಿನಿಯರಿಂಗ್

1 ಅಪೂರ್ವ ಟಂಡನ್

2 ಸಿದ್ದಾರ್ಥ ಸಿಂಗ್

3 ಆತ್ಮಕುರಿ ವೆಂಕಟ ಮಾದ್

ಯೋಗ ಮತ್ತು ನ್ಯಾಚುರೋಪತಿ

1 ಹೃಷಿಕೇಶ್

2 ವಿ ರಾಜೇಶ್.

3 ಕೃಷ್ಣ

ಬಿ.ವಿ.ಎಸ್ ಸಿ ( ಪಶುವೈದ್ಯಕೀಯ ವಿಜ್ಞಾನ)

1 ಹೃಷಿಕೇಶ್

2 ಮನೀಷ್

3 ಶುಭ ಕೌಶಿಕ್

ಬಿಎಸ್ ಸಿ ಕೃಷಿ

1 ಅರ್ಜುನ್ ರವಿಶಂಕರ್

2 ಸುಮೀಸ್ ಎಸ್ ಪಾಟೀಲ್

3 ಸುದೀಪ್

ಬಿ ಫಾರ್ಮ್

1 ಶಿಶಿರ್

2 ಹೃಷಿಕೇಶ್

3 ಅಪೂರ್ವ ಟಂಡನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next