Advertisement

ಸಿಸೇರಿಯನ್‌ ಪ್ರಕರಣ ಶೇ.300 ರಷ್ಟು ಹೆಚ್ಚಳ

09:57 AM Jan 03, 2020 | mahesh |

ನೈಸರ್ಗಿಕ ಹೆರಿಗೆಗಿಂತ ಶಸ್ತ್ರಚಿಕಿತ್ಸೆ (ಸಿಸೇರಿಯನ್‌) ಮೂಲಕ ಮಾಡುವ ಹೆರಿಗೆ ಪ್ರಮಾಣ ದೇಶದಲ್ಲಿ ಹೆಚ್ಚಾಗುತ್ತಿದ್ದು, ಕಳೆದೊಂದು ದಶಕದಲ್ಲಿ ತೀವ್ರ ಏರಿಕೆ ಕಂಡಿದೆ. ಈ ಕುರಿತ ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಕಾರಣವೇನು? ಯಾಕೆ ಹೀಗೆ? ಮೊದಲಾದಗಳ ಕುರಿತ ವಿವರ ಇಲ್ಲಿದೆ.

Advertisement

ಶೇ.300ರಷ್ಟು ಹೆಚ್ಚಳ
ಕಳೆದ ದಶಕದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಸಿಸೇರಿಯನ್‌ ಹೆರಿಗೆ ಪ್ರಮಾಣ ದಲ್ಲಿ ಶೇ.300ರಷ್ಟು ಏರಿಕೆಯಾಗಿದೆ.

ಶೇ.400ರಷ್ಟು ಹೆಚ್ಚಳ
ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಸಿಸೇರಿಯನ್‌ ಹೆರಿಗೆಗಳ ಪ್ರಮಾಣದಲ್ಲಿ ಶೇ.400ರಷ್ಟು ಏರಿಕೆಯಾಗಿದೆ.

ಶೇ.14ರಷ್ಟು
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯ ಪ್ರಕಾರ, 2018-19ರಲ್ಲಿ ಸರಕಾರಿ ಆಸ್ಪತ್ರೆ ಗಳಲ್ಲಿ ಶೇ.14ಕ್ಕಿಂತಲೂ ಹೆಚ್ಚು ಹೆರಿಗೆ ಗಳು ಸಿಸೇರಿಯನ್‌ ಮೂಲಕ ನಡೆದಿದ್ದು, 1.3ಕೋಟಿ ಹೆರಿಗೆಗಳ ಪೈಕಿ 19 ಲಕ್ಷ ಹೆರಿಗೆಗಳು ಸಿಸೇರಿಯನ್‌ ಮೂಲಕ ನಡೆದಿವೆ.

ಶೇ.33 ರಷ್ಟು
ಖಾಸಗಿ ಆಸ್ಪತ್ರೆಗಳಲ್ಲಿ ಶೇ.33.80 ಕ್ಕಿಂತಲೂ ಹೆಚ್ಚು ಹೆರಿಗೆಗಳು ಸಿಸೇರಿಯನ್‌ ಮೂಲಕ ನಡೆದಿದ್ದು, 20.5 ಲಕ್ಷ ಹೆರಿಗೆಗಳಾಗಿವೆ.

Advertisement

ರಾಜ್ಯಕ್ಕೆ 3ನೇ ಸ್ಥಾನ
2017-18ನೇ ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 1,42,641 ಹೆರಿಗೆಗಳು ಸಿಸೇರಿಯನ್‌ ಮೂಲಕ ಆಗಿದೆ. 2008-09 ರಲ್ಲಿ 20,762 ಹೆರಿಗೆಗಳಾಗಿತ್ತು.

2018-19ರಲ್ಲಿ 1.37 ಲಕ್ಷ
2018-19ರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 1.37 ಲಕ್ಷ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1.4 ಲಕ್ಷ ಸಿಸೇರಿಯನ್‌ ಆಗಿದೆ.

12,960 ಸಿಸೇರಿಯನ್‌
ದ.ಕ. ಜಿಲ್ಲೆಯಲ್ಲಿ 2018- 19ನೇ ಸಾಲಿನಲ್ಲಿ ಆದ ಒಟ್ಟು 35,972 ಹೆರಿಗೆಗಳ ಪೈಕಿ 12,960 ಸಿಸೇರಿಯನ್‌ ಆಗಿದೆ.

ಹೆಚ್ಚಳಕ್ಕೆ ಕಾರಣವೇನು ?
ಬಹುತೇಕ ಮಂದಿ ಸಹಜ ಹೆರಿಗೆಯನ್ನೇ ಇಷ್ಟಪಡುತ್ತಾರೆ. ಆದರೆ ಅಧಿಕ ಅಪಾಯ, ಅಧಿಕ ರಕ್ತದೊತ್ತಡ, ಹೆರಿಗೆ ಸಂದರ್ಭ, ಇತರ ಅನಾರೋಗ್ಯದ ಕಾರಣಗಳಿಂದಾಗಿ ತಾಯಿ, ಮಗುವಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ.

ದಾಟಿದ ಮಿತಿ
ದೇಶದಲ್ಲಿ ಸಿಸೇರಿಯನ್‌ ಮೂಲಕ ಆಗುವ ಹೆರಿಗೆ ಪ್ರಮಾಣಗಳು ಹೆಚ್ಚುತ್ತಿದ್ದು, ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಮಿತಿಯನ್ನು ಶೇ.15 ದಾಟಿದೆ ಎಂದು ಅಧ್ಯಯನವು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next