Advertisement
ಶಿಕ್ಷಣ, ಉದ್ಯೋಗ ಸರಕಾರಿ ಸೌಲಭ್ಯ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬೇಕಾಗುವ ಜಾತಿ-ಆದಾಯ ಪ್ರಮಾಣ ಪತ್ರ ಪಡೆಯಲು ಈ ಹಿಂದೇ ಸಾರ್ವಜನಿಕರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರು. ಶೈಕ್ಷಣಿಕ ವರ್ಷದ ಆರಂಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಹೆಚ್ಚು ಅರ್ಜಿಗಳು ಬರುತ್ತಿದ್ದವು. ಈ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು ನಾಡ ಕಚೇರಿ, ಕಂದಾಯ ನೀರಿಕ್ಷಕರ ಕಚೇರಿ, ತಹಸೀಲ್ದಾರ ಕಚೇರಿಗೆ ಅಲೆಯಬೇಕಾಗಿತ್ತು. ಅಲ್ಲದೇ ಜಾತಿ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಭ್ರಷ್ಟಾಚಾರದ ಅನೇಕ ಆರೋಪಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಗದ ರಹಿತವಾಗಿ ಪ್ರಮಾಣ ಪ್ರತ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ.
ವ್ಯವಸ್ಥೆಯೂ ಪಾರದರ್ಶಕವಾಗಲಿದೆ. ಮೂರು ವರ್ಷಗಳಿಂದ ಕಂದಾಯ ಇಲಾಖೆ ಆನ್‌ಲೈನ್ ವ್ಯವಸ್ಥೆಗೆ ಹೊಂದಿಕೊಂಡಿದ್ದು, ಎಲ್ಲಾ ತರಹದ ಪ್ರಮಾಣ ಪತ್ರಗಳು ಆನ್‌ಲೈನ್ ಮೂಲಕವೇ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಪ್ರಮಾಣ ಪತ್ರಗಳಿಗೆ ಆಧಾರ್ ಸಂಖ್ಯೆ ಜೋಡಿಸಿಕೊಂಡಿರುವುದು, ಇಲಾಖೆಗೆ ಸಹಾಯವಾಗಿದೆ. ಕಾರಣ ಕ್ಷಣದಲ್ಲಿಯೇ ಪ್ರಮಾಣಪತ್ರ ಸಿಗುವಂತಾಗುತ್ತಿದೆ. ಹೇಗೆ ಪಡೆಯುವುದು?: ಯಾರಿಗೆ ಜಾತಿ-ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೊ ಅವರು ಸಮೀಪದ ಅಟಲ್‌ಜೀ
ಜನಸ್ನೇಹಿ ಕೇಂದ್ರಕ್ಕೆ ತೆರಳಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ (ಯಾವುದಾದರೊಂದು
ದಾಖಲೆ) ಅಥವಾ ನೋಂದಾಯಿಸಿದ ಮೂಬೈಲ್ ಸಂಖ್ಯೆ ತಿಳಿಸಿ ದೃಢೀಕರಿಸಬೇಕು. ನಿಗದಿತ ಶುಲ್ಕ ಪಾವತಿಸಿದರೆ ಆಯ್ತು, ನಿಮ್ಮ ಪ್ರಮಾಣಪತ್ರ ಮುದ್ರಣಗೊಳ್ಳುತ್ತದೆ.
Related Articles
ಬದಲಾವಣೆಗೆ ಅವಕಾಶ ನೀಡಲಾಗಿದೆ. ಆದಾಯ ಹೆಚ್ಚಾದಲ್ಲಿ ಅಥವಾ ಕಡಿಮೆಯಾದಲ್ಲಿ, ವಿಳಾಸ ಬದಲಾವಣೆ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಅದೇ ಕೇಂದ್ರಕ್ಕೆ ತೆರಳಿ ಮೂಲ ದಾಖಲೆಗಳ ಜೊತೆ ನಿಗದಿತ ಅರ್ಜಿ ನಮೂನೆ ಸಲ್ಲಿಸಿದರೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
Advertisement
ಆನ್‌ಲೈನ್ ಪಹಣಿ: ಪಹಣಿ ಪತ್ರಿಕೆಯನ್ನು ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ. ಆದರೆ ಆನ್‌ಲೈನ್ ಮೂಲಕ ಪಡೆದ ಪಹಣಿಯನ್ನು ವಿವಿಧ ಸೌಲಭ್ಯಗಳಿಗೆ ಬಳಸಲು ಸಾಧ್ಯವಾಗುತ್ತಿರಲ್ಲಿಲ್ಲ. ಕಾರಣ ಕಂದಾಯ ಇಲಾಖೆ ಅಥವಾ ಗ್ರಾಮ ಪಂಚಾಯತ ಮೂಲಕ ನೀಡುವ ಪಹಣಿಗಾಗಿ ಜನರು ಪರದಾಡುವ ಸ್ಥಿತಿ ಇತ್ತು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಆನ್‌ಲೈನ್ ಮೂಲಕ ಪಹಣಿ ಪತ್ರ ಪಡೆಯಲು ಸರ್ಕಾರ ವ್ಯವಸ್ಥೆ ರೂಪಿಸಿದ್ದು, 2018ರಿಂದ ಹೊಸ ಪಹಣಿಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ
ತಾಲೂಕಿನ ಗ್ರಾಮೀಣ ಭಾಗದ 38 ಸಾವಿರ ಅರ್ಜಿಗಳನ್ನು ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ. ಹುಮನಾಬಾದ ಪಟ್ಟಣ, ಚಿಟಗುಪ್ಪ ಪಟ್ಟಣ ಹೊರತುಪಡಿಸಿ ಎಲ್ಲಾ ಗ್ರಾಮೀಣ ಭಾಗದ ಜನರ ಅರ್ಜಿಗಳು ಆನ್‌ಲೈನ್‌ಗೆ ಸೇರ್ಪಡೆಗೊಂಡಿವೆ. ಈ ಮೂಲಕ ಜಾತಿ-ಆದಾಯ ಹಾಗೂ ಪಹಣಿ ಪತ್ರಿಕೆಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಎರಡು ಪಟ್ಟಣಗಳ ಅರ್ಜಿಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಕೆಲ ದಿನಗಳಲ್ಲೀ ಅವುಗಳು ಕೂಡ ಆನ್‌ಲೈನ್‌ಗೆ ಸೇರಲಿವೆ. ದೇವೆಂದ್ರಪ್ಪ ಪಾಣಿ, ತಹಶೀಲ್ದಾರ್ ಹುಮನಾಬಾದ ದುರ್ಯೋಧನ ಹೂಗಾರ