Advertisement
ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಸ್ಟಾಂಡ್ನಲ್ಲಿದ್ದ ಆಸ್ಟ್ರೇಲಿಯದ ಬಾಲ ಅಭಿಮಾನಿಯೋರ್ವ ವಾರ್ನರ್ ಕಣ್ಣಿಗೆ ಬಿದ್ದಿದ್ದ. ಇದರಿಂದ ಪ್ರೇರಿತರಾದ ವಾರ್ನರ್ ತಮ್ಮ ಟ್ರೋಫಿಯನ್ನು ಆತನಿಗೆ ನೀಡಿದರು. ಇದಕ್ಕೂ ಮುನ್ನ ಆತನ ಕೈಲಿದ್ದ ರಾಷ್ಟ್ರಧ್ವಜದ ಮಾದರಿ ಮೇಲೆ ವಾರ್ನರ್ ಹಸ್ತಾಕ್ಷರವನ್ನೂ ಹಾಕಿದರು.ಇದನ್ನು ನಿರೀಕ್ಷಿಸದೇ ಇದ್ದ ಆ ಬಾಲಕ ಆಶ್ಚರ್ಯಚಕಿತನಾಗಿದ್ದ. ಆತನ ಖುಷಿಗೆ ಪಾರವೇ ಇರಲಿಲ್ಲ. “ಏನು ಹೇಳಬೇಕೆಂದೇ ತೋಚುತ್ತಿಲ್ಲ. ಈ ಘಟನೆಯಿಂದ ನಾನು ರೋಮಾಂಚನಗೊಂಡಿದ್ದೇನೆ. ನಾವೆಲ್ಲ ಆಸ್ಟ್ರೇಲಿಯಕ್ಕೆ ಬೆಂಬಲ ಸೂಚಿಸುತ್ತ ಬಾವುಟ ಹಾರಿಸುತ್ತ ಕುಳಿತಿದ್ದೆವು. ಈಗ ಈ ಅನಿರೀಕ್ಷಿತ ಉಡುಗೊರೆಯೊಂದು ಲಭಿಸಿದೆ. ಥ್ಯಾಂಕ್ಯೂ ವಾರ್ನರ್ ಸರ್…’ ಎಂದು ಆ ಬಾಲಕ ಪ್ರತಿಕ್ರಿಯಿಸಿದ್ದಾನೆ. ಡೇವಿಡ್ ವಾರ್ನರ್ ಅವರ ಈ ನಡೆಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ.