ಕೋಲಾರ: ಇಟ್ಟಿದ್ದ ಠೇವಣಿ ಹಣವೂ ವಾಪಸ್ಸು ಕೊಡದೇ ಸಾಲವೂ ವಿತರಿಸದೇ ವಂಚಿಸಲಾಗಿದೆ ಎಂದು ಆರೋಪಿಸಿ, ತಾಲೂಕಿನ ವಡಗೂರಿನ ಹುತ್ತೂರು ಸೊಸೈಟಿ ಸಿಇಒ ವಿರುದ್ಧ ಸಿಡಿದೆದ್ದು ವಡಗೂರು ಗೇಟ್‌ಬಳಿ ಮಾ.22ರಿಂದ ಹಗಲುರಾತ್ರಿರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದ ಮಹಿಳೆಯರ ಮನವೊಲಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಭಟನೆ ಕೈಬಿಡುವಂತೆ ಮಾಡುವಲ್ಲಿ ಸಫಲರಾದರು.
ತಾಲೂಕಿನ ನಂದಂಬಳ್ಳಿಯ 20ಕ್ಕೂ ಹೆಚ್ಚು ಮಹಿಳಾ ಸಂಘಗಳ ಪ್ರತಿನಿಧಿಗಳು ಕಳೆದ ಮಾ.18ರಂದು ವಡಗೂರಿನ ಹುತ್ತೂರು ಸೊಸೈಟಿ ಸಿಇಒ ವಿಜಯಕುಮರ್ ವಿರುದ್ಧ ಪ್ರತಿಭಟನೆ ನಡೆಸಿ, ಸೊಸೈಟಿಗೆಮುತ್ತಿಗೆ ಹಾಕಿದ್ದರು. ಜತೆಗೆ ಮಾ.22ರಿಂದ ಹೆದ್ದಾರಿ ತಡೆಗೆನಿರ್ಧಾರ ಮಾಡಿರುವ ಮಾಹಿತಿ ತಿಳಿದ ಗೋವಿಂದ ಗೌಡ, ಭಾನುವಾರ ಗ್ರಾಮಕ್ಕೆ ತೆರಳಿ ಮಹಿಳೆಯರ ಸಭೆ ನಡೆಸಿ ಸಾಲ ವಿತರಿಸುವ ಭರವಸೆ ನೀಡುವ ಮೂಲಕ ಪ್ರತಿಭಟನೆ ಕೈಬಿಡುವಂತೆ ಮಾಡಿದರು.
ಮಹಿಳೆಯರಿಗೆ ಸಾಲ ನೀಡಲು ಸಿದ್ಧ: ಗೋವಿಂದ ಗೌಡರು ಮಾತನಾಡಿ, ಸೊಸೈಟಿ ಸಿಇಒ ಮಹಿಳೆಯರಿಗೆ ವಂಚಿಸಿದ್ದಾರೆ, ಈ ಘಟನೆಗೂ ಡಿಸಿಸಿ ಬ್ಯಾಂಕಿಗೂ ಸಂಬಂಧವಿಲ್ಲ, ಮಹಿಳೆಯರು ಕಳೆದ ವಾರ ಸೊಸೆ„ ಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ವಿಷಯ ತಿಳಿದು ನಾನು ಸಮಸ್ಯೆ ಪರಿಹರಿಸಲು ಮುಂದಾಗಿದ್ದೇನೆ.ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡಲುಸಿದ್ಧವಿದೆ. ಸೊಸೆ„ಟಿ ಅಧ್ಯಕ್ಷ ರಾಮು ಅವರು ಏ.5ರೊಳಗೆ ಮಹಿಳಾ ಸಂಘಗಳ ಸಾಲದ ಪ್ರಸ್ತಾವನೆಅರ್ಜಿಗಳನ್ನು ಸಿದ್ಧಗೊಳಿಸಿ, ಬ್ಯಾಂಕಿಗೆಸಲ್ಲಿಸಿದಲ್ಲಿ ಎಲ್ಲಾ ಸಂಘಗಳಿಗೂ ಯುಗಾದಿಗೆ ಮುನ್ನವೇ ಸಾಲಒದಗಿಸುವುದಾಗಿಯೂ ಮತ್ತು ಮಹಿಳಾ ಸಂಘಗಳಠೇವಣಿ ಹಣ ಅವರ ಖಾತೆಗಳಲಿಗೆ ಜಮಾ ಮಾಡಿಸ ಬೇಕು ಎಂದು ಸೊಸೈಟಿ ಅಧ್ಯಕ್ಷರು, ನಿರ್ದೇಶಕರಿಗೆ ತಾಕೀತು ಮಾಡಿದರು.
ಹೆದರಿ ಸಭೆಗೆ ಬಾರದ ಸಿಇಒ: ಮಹಿಳೆಯರಿಗಾಗಿರುವ ಅನ್ಯಾಯ ಅರಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಸೊಸೈಟಿ ಅಧ್ಯಕ್ಷ ವಡಗೂರು ರಾಮು ಮೂಲಕ ಸಿಇಒ ವಿಜಯಕುಮರ್‌ರನ್ನು ಭಾನುವಾರ ಡಿಸಿಸಿಬ್ಯಾಂಕಿಗೆ ಕರೆಸಿಕೊಂಡು ತರಾಟೆಗೆತೆಗೆದುಕೊಂಡರಲ್ಲದೇ, ಗ್ರಾಮದಲ್ಲೇ ಮಧ್ಯಾಹ್ನಮಹಿಳೆಯರ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿತಿಳಿಸಿದ್ದರು. ಆದರೆ, ಸೊಸೈಟಿ ಅಧ್ಯಕ್ಷರು,ನಿರ್ದೇಶಕರು ನಂದಂಬಳ್ಳಿಗೆ ಹಾಜರಾದರೂ ಸೊಸೈಟಿಸಿಇಒ ವಿಜಯ ಕುಮಾರ್ ಮಹಿಳೆಯರಿಗೆ ಹೆದರಿಸಭೆಗೆ ಗೈರಾಗಿದ್ದುದು ಮಹಿಳೆ ಯರು ಹಾಗೂಸೊಸೈಟಿ ಅಧ್ಯಕ್ಷರನ್ನು ಕೆರಳಿಸುವಂತೆ ಮಾಡಿತು.
ಮರು ಸಾಲ ಕೊಡಿಸಲು ಪ್ರಯತ್ನಿಸಿ: ಗೋವಿಂದ ಗೌಡರು ಮಾತನಾಡಿ, ಸಿಇಒರನ್ನು ಜತೆಯಲ್ಲೇ ಕರೆತನ್ನಿ ಎಂದು ಹೇಳಿದರೂ ನೀವು ಕೇಳಲಿಲ್ಲ, ಈಗ ಪತ್ತೆ ಇಲ್ಲ, ಇದಕ್ಕೆ ಸೊಸೆ„ಟಿ ಅಧ್ಯಕ್ಷರು, ನಿರ್ದೇಶಕರೇಉತ್ತರ ನೀಡಬೇಕು. ಇಂದು ಮಹಿಳೆಯರಿಗೆಅನ್ಯಾಯ ವಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿಸಿ ರುವ ತಾಯಂದಿರಿಗೆ ಮರು ಸಾಲ ಕೊಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ವಹಿವಾಟಿನ ಲೆಕ್ಕ ಸಿಗುತ್ತಿಲ್ಲ: ಸೊಸೈಟಿ ಅಧ್ಯಕ್ಷ ವಡಗೂರು ರಾಮು ಮಾತನಾಡಿ, ಸೊಸೈಟಿಗೆ ನಾನು ಹೊಸದಾಗಿ ಅಧ್ಯಕ್ಷನಾಗಿದ್ದೇನೆ. ಇಲ್ಲಿ ನಡೆದಿರುವ ವಹಿ ವಾಟು ಕುರಿತಂತೆ ಲೆಕ್ಕವೇ ಸಿಗದಂತಾಗಿದೆ. ಹೋಬಳಿ ಯಲ್ಲಿ ತಲೆಯೆತ್ತಿಕೊಂಡು ನಡೆಯುವಂತಿಲ್ಲ,ಆದರೂ, ಮಹಿಳೆಯರಿಗಾಗಿರುವ ಅನ್ಯಾಯ ಸರಿಪಡಿಸ ಬೇಕಾಗಿದೆ. ಮಹಿಳಾ ಸಂಘಗಳ ಸಾಲದ ಅರ್ಜಿಗಳನ್ನು ತಾವೇ ಖುದ್ದು ಸಿದ್ಧಪಡಿಸಿ, ಡಿಸಿಸಿ ಬ್ಯಾಂಕಿಗೆ ತಲುಪಿಸುವುದಾಗಿಯೂ ಯುಗಾದಿಗೆ ಮುನ್ನಾ ಸಾಲವಿತರಿಸುವುದಾಗಿಯೂ ತಿಳಿಸಿ, ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಿಸುವ ಸುಳಿವು ನೀಡಿದರು.
ಬ್ಯಾಂಕ್ ಬಗ್ಗೆ ನಂಬಿಕೆ ಇದೆ: ಪ್ರತಿನಿಧಿ ಶಾರದಮ್ಮಮಾತನಾಡಿ, ಡಿಸಿಸಿ ಬ್ಯಾಂಕಿನಿಂದ ಪ್ರತಿನಿತ್ಯ ಸಾಲ ವಿತರಿ ಸುತ್ತಿರುವುದನ್ನು ಪತ್ರಿಕೆಗಳ ಮೂಲಕ ನೋಡಿದ್ದೇವೆ. ಬ್ಯಾಂಕ್ ಬಗ್ಗೆ ನಂಬಿಕೆ ಇದೆ, ಗೋವಿಂದಗೌಡರ ಮಾತಿಗೆ ಕಟ್ಟುಬಿದ್ದು, ಇದೀಗ ಪ್ರತಿಭಟನೆ ಹಿಂಪಡೆ ಯುತ್ತಿದ್ದೇವೆ ಎಂದರು. ಕೆಲವು ಮಹಿಳೆಯರು, ಸಿಇಒ ಯಾರ ಬೆಂಬಲ ದಿಂದ ಈ ರೀತಿ ನಮಗೆಅನ್ಯಾಯ ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಗ್ರಾಮಕ್ಕೆ ಬಂದರೆ ಕಟ್ಟಿಹಾಕು ವುದಾಗಿಯೂ ಆಕ್ರೋಶವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಸೊಸೈಟಿ ನಿರ್ದೇಶಕರಾದ ನಾರಾಯಣ ಸ್ವಾಮಿ, ಸೀಸಂದ್ರ ರಮೇಶ್ ಕುಮಾರ್, ಮೇಡಿತಂಬಿ ಹಳ್ಳಿ ರಮೇಶ್,ಮುಖಂಡರಾದ ಚಿನ್ನಪ್ಪ, ಅಶೋಕ್, ಎಂ.ವೆಂಕಟೇಶಪ್ಪ, ಮಹಿಳಾ ಪ್ರತಿನಿಧಿಗಳಾದ ಪಾಪಮ್ಮ, ಸುಶೀಲಾ, ವಿಶಾಲ, ಜಯಮ್ಮ ಹಾಜರಿದ್ದರು.