Advertisement
ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳನ್ನು ನಿಯಂತ್ರಿಸಲು ಚುನಾ ವಣಾ ಆಯೋಗ ಸಾರ್ವಜನಿಕ ಸ್ನೇಹಿ ಆ್ಯಪ್ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
Related Articles
Advertisement
ದೂರು ಕೈಗೆತ್ತಿಕೊಂಡ ಅಧಿಕಾರಿಗಳ ತಂಡ 100 ನಿಮಿಷಗಳ ಕಾಲಾವಧಿಯೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತದೆ. ದೂರು ದಾಖಲಾದ 100 ನಿಮಿಷದೊಳಗೆ ದೂರುದಾರ ನಾಗರಿಕನಿಗೆ ದೂರಿನ ತನಿಖೆಯ ಮಾಹಿತಿಯ ಸ್ಥಿತಿ ಸಿ-ವಿಜಿಲ್ ಆ್ಯಪ್ ಮೂಲಕ ರವಾನೆಯಾಗುತ್ತದೆ.
ಕೇಂದ್ರ ಚುನಾವಣಾ ಆಯೋಗ ಕಣ್ಣುಈ ಎಲ್ಲ ಆನ್‌ಲೈನ್ ಬೆಳವಣಿಗೆಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ಕಣ್ಣಿಟ್ಟಿರುತ್ತದೆ. ಮತದಾರರನ್ನು ಸೆಳೆ ಯಲು ಹಣ, ಮದ್ಯ ಹಂಚುವುದು, ಉಡುಗೊರೆ ನೀಡುವುದು, ಧಾರ್ಮಿಕ ಸ್ಥಳ, ಸಮುದಾಯ ಭವನಗಳಲ್ಲಿ ಮತ ಯಾಚಿಸುವುದು, ಧ್ವನಿ ವರ್ಧಕಗಳನ್ನು ಅನುಮತಿ ಇಲ್ಲದ ಸಮಯದಲ್ಲಿ ಬಳಸುವುದು ಕಂಡುಬಂದಲ್ಲಿ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಪ್ರತಿಯೊಬ್ಬರೂ ಸಿ-ವಿಜಿಲ್ ಆ್ಯಪ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು. ದೂರು ನೀಡುವ ನಾಗರಿಕರು ತಮ್ಮ ಮೊಬೈಲ್ ನಂ. ಮತ್ತು ಹೆಸರು ನೊಂದಾ ಯಿಸಬೇಕು ಅಥವಾ ಅನಾಮಧೇಯರಾಗಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ದೂರುದಾರರಿಗೆ ಮಾತ್ರ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಲಭಿಸಲಿದೆ. ಎಲ್ಲ ನಾಗರಿಕರು ಸಿ-ವಿಜಿಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷಿ¾ಪ್ರಿಯಾ ಅವರು ಕೋರಿದ್ದಾರೆ. ಗೂಗಲ್ ಪ್ಲೇಸ್ಟೋರ್
ಸಿ-ವಿಜಿಲ್ ಆ್ಯಪ್‌ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಫೋಟೋ ಅಥವಾ ವಿಡಿಯೋ ಮೂಲಕ ದೂರನ್ನು ದಾಖಲಿಸಬಹುದು. ಸಿ-ವಿಜಿಲ್ ಆ್ಯಪ್ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಕಾರ್ಯಚರಣೆಯಲ್ಲಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡುವ ವ್ಯಕ್ತಿ, ಗುಂಪು, ಸ್ಥಳದ ಫೋಟೋ, ವೀಡಿಯೋಗಳನ್ನು ಈ ಆ್ಯಪ್‌ನಲ್ಲಿ ದಾಖಲಿಸಿ, ಜಿಲ್ಲಾ ಚುನಾವಣಾ ಘಟಕಕ್ಕೆ ನಾಗರಿಕರು ರವಾನಿಸಬಹುದು. ನಾಗರಿಕರು ಕಳುಹಿಸುವ ಈ ದೂರುಗಳು ಸಮೀಪದ ಜಿಲ್ಲಾ ಚುನಾವಣಾ ಆಯೋಗದ ಕಂಟ್ರೋಲ್ ರೂಂನಲ್ಲಿ ದಾಖಲಾಗುತ್ತದೆ.