Advertisement

ಪಬ್‌ನಲ್ಲಿ ಲೈಂಗಿಕ ಕಿರುಕುಳ:ಖಾಸಗಿ ಕಂಪೆನಿ CEO ಬಂಧನ

11:34 AM Sep 26, 2017 | |

ಬೆಂಗಳೂರು: ದೊಮ್ಮಲೂರಿನ ಪಬ್‌ವೊಂದರಲ್ಲಿ ಯುವತಿಗೆ ಕುಡಿದ ಮತ್ತಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ನಗರದ ಖಾಸಗಿ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಬಂಧನಕ್ಕೊಳಗಾದವ ಮನೀಶ್‌ ಎಂಬಾತನಾಗಿದ್ದು, ಈತ ಕಳೆದ ಬುಧವಾರ ರಾತ್ರಿ ಪಬ್‌ಗೆ ತೆರಳಿದ್ದ ವೇಳೆ ಕುಡಿದು ಯುವತಿಯೊಂದಿಗೆ ತೀರಾ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಶುಕ್ರವಾರ ದೂರು ದಾಖಲಾಗಿತ್ತು. 

ದೂರು ದಾಖಲಿಸಿಕೊಂಡಿದ್ದ  ಹಲಸೂರು ಠಾಣೆಯ ಪೊಲೀಸರು ಸೋಮವಾರ ಸಂಜೆ ಮನೀಶ್‌ನನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next