Advertisement
ಆಂದ್ರಪ್ರದೇಶದ ಪೂರ್ವ ಗೋದಾವರಿಯಲ್ಲಿರುವ ಪುರಾತನ ಪ್ರಸಿದ್ಧ ದೇವಾಲಯವಾದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿರುವ 40 ಅಡಿ ಎತ್ತರದ ಮರದ ರಥವೊಂದು ಬೆಂಕಿಗೆ ಆಹುತಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.
ಶತಮಾನಗಳಷ್ಟು ಹಳೆಯದಾದ ಈ ರಥವನ್ನು ದೇವಸ್ಥಾನದ ವಿಶೇಷ ದಿನಗಳ ಸಂದರ್ಭ ರಥೋತ್ಸವಕ್ಕೆ ಹೊರಕ್ಕೆ ತರಲಾಗುತ್ತದೆ. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ರಥವನ್ನು ಶೆಡ್ ನಿಂದ ಹೊರಗಡೆ ತಂದಿದ್ದು ಆ ಬಳಿಕ ರಥವನ್ನು ದೇವಸ್ಥಾನದ ರಥದ ಶೆಡ್ ನಲ್ಲಿ ಇಡಲಾಗಿತ್ತು ಯಾರೋ ಕಿಡಿಗೇಡಿಗಳು ರಥಕ್ಕೆ ಬೆಂಕಿ ಹಚ್ಚಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
Related Articles
Advertisement
ಪೋಲೀಸರ ಹೇಳಿಕೆಯಂತೆ ರಥಕ್ಕೆ ಬೆಂಕಿ ಹೇಗೆ ಹಿಡಿಯಿತು ಎಂದು ತನಿಖೆ ನಡೆಸುತ್ತಿದ್ದೇವೆ, ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರ ಬಹುದೋ ಅಥವಾ ಬೇರೆ ಯಾರಾದರೂ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೋ ಎಂಬ ಎರಡು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ, ಕಳೆದ ಕೆಲವು ತಿಂಗಳ ಹಿಂದೆ ಆಂಧ್ರಪ್ರದೇಶದ ನೆಲ್ಲೂರು ತಾಲೂಕಿನಲ್ಲಿ ಮಾನಸಿಕ ಅಸ್ವಸ್ತನೊಬ್ಬ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ಘಟನೆಯೂ ಇದೆ ಹಾಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.