Advertisement

INDvsSA; ಎಲ್ಗರ್ ಜತೆ ಮಿಂಚಿದ ಜೆನ್ಸನ್: 163 ರನ್ ಮುನ್ನಡೆ ಸಾಧಿಸಿದ ದ.ಆಫ್ರಿಕಾ

05:28 PM Dec 28, 2023 | Team Udayavani |

ಸೆಂಚೂರಿಯನ್: ಮೂರನೇ ದಿನದಾಟದ ಆರಂಭದಲ್ಲಿಯೂ ಬ್ಯಾಟಿಂಗ್ ಪ್ರಭುತ್ವ ಸಾಧಿಸಿದ ದಕ್ಷಿಣ ಆಫ್ರಿಕಾವು ಮೊದಲ ಇನ್ನಿಂಗ್ಸ್ ನಲ್ಲಿ 163 ರನ್ ಮುನ್ನಡೆ ಸಾಧಿಸಿದೆ. ಡೀನ್ ಎಲ್ಗರ್ ಜತೆ ಮಿಂಚಿದ ಮಾರ್ಕೊ ಜೆನ್ಸನ್ ಸಹಾಯದಿಂದ ದ.ಆಫ್ರಿಕಾ ತಂಡವು 408 ರನ್ ಕಲೆಹಾಕಿತು.

Advertisement

ಐದು ವಿಕೆಟ್ ಗೆ 256 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ದ.ಆಫ್ರಿಕಾಗೆ ಎಲ್ಗರ್ ಮತ್ತು ಜಾನ್ಸನ್ ನೆರವಾದರು. ಆರನೇ ವಿಕೆಟ್ ಗೆ ಅವರು 111 ರನ್ ಜೊತೆಯಾಟವಾಡಿದರು. ಬುಧವಾರ ಶತಕ ಸಿಡಿಸಿ ಅಜೇಯರಾಗಿದ್ದ ಎಲ್ಗರ್ ಇಂದು 185 ರನ್ ಗಳಿಸಿ ಔಟಾದರು. ಎಲ್ಗರ್ ಔಟಾದ ಬಳಿಕವೂ ಬ್ಯಾಟಿಂಗ್ ಮುಂದುವರಿಸಿದ ಮಾರ್ಕೊ ಜಾನ್ಸನ್ ಅಜೇಯ 84 ರನ್ ಗಳಿಸಿದರು.

ದ.ಆಫ್ರಿಕಾ ನಾಯಕ ತೆಂಬಾ ಬವುಮಾ ಅವರು ಗಾಯಗೊಂಡ ಕಾರಣ ಬ್ಯಾಟಿಂಗ್ ಗೆ ಇಳಿಯಲಿಲ್ಲ.

ಭಾರತದ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಿತ್ತರೆ, ಸಿರಾಜ್ ಎರಡು ವಿಕೆಟ್ ಪಡೆದರು. ಪ್ರಸಿಧ್ ಕೃಷ್ಣ, ಶಾರ್ದೂಲ್ ಠಾಕೂರ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next