Advertisement
ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಯಲ್ಲಿನ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ 5,500ರಿಂದ 6 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ
Related Articles
Advertisement
ಕೇಂದ್ರ ಸರ್ಕಾರ ಘೋಷಿಸಿದ ಈ ಚಕ್ರಬಡ್ಡಿ ಮನ್ನಾ ಎಲ್ಲಾ ಚಿಲ್ಲರೆ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸುಮಾರು 2 ಕೋಟಿ ರೂಪಾಯಿವರೆಗೆ ಸಾಲ ಪಡೆದಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ಆರು ತಿಂಗಳ ಕಾಲಾವಧಿಯಲ್ಲಿ ಸಾಲದ ಕಂತಿನ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗಿದೆ.
*ಗೃಹ ಸಾಲ, ಶಿಕ್ಷಣ ಸಾಲಗಳು, ಕ್ರೆಡಿಟ್ ಕಾರ್ಡ್ಸ್ ಬಾಕ, ಆಟೋ ಸಾಲ, ಎಂಎಸ್ ಎಂಇ ಸಾಲ, ಗ್ರಾಹಕ ಸ್ನೇಹಿ ಸಾಲಕ್ಕೆ ಈ ಘೋಷಣೆ ಅನ್ವಯವಾಗಲಿದೆ.
*ಸಾಲ ನೀಡಿರುವ ಸಂಸ್ಥೆ ಕಡ್ಡಾಯವಾಗಿ ಬ್ಯಾಂಕ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್, ಕೋ-ಆಪರೇಟಿವ್ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್, ಆಲ್ ಇಂಡಿಯಾ ಫೈನಾಶ್ಶಿಯಲ್ ಇನ್ಸ್ ಟಿಟ್ಯೂಷನ್, ಬ್ಯಾಂಕೇತರ ಆರ್ಥಿಕ ಕಂಪನಿ, ಹೌಸಿಂಗ್ ಫೈನಾನ್ಸಿ ಕಂಪನಿಯಾಗಿರಬೇಕು.