Advertisement
ಇದನ್ನೂ ಓದಿ:ಭಾರತದ ಬೌಲಿಂಗ್ ದಾಳಿಗೆ ಬೆದರಿದ ಕಿವೀಸ್: ಕೇವಲ 62 ರನ್ ಗೆ ಆಲೌಟ್
Related Articles
Advertisement
ನವೆಂಬರ್ 25ರಿಂದ ಡಿಸೆಂಬರ್ 2ರ ನಡುವೆ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಶೇ.152ರಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರ್ನಾಟಕ ಸೇರಿದಂತೆ ಒಡಿಶಾ, ಜಮ್ಮು-ಕಾಶ್ಮೀರ, ಮಿಜೋರಾಂ, ಕೇರಳ ಮತ್ತು ತಮಿಳುನಾಡಿಗೂ ಆರೋಗ್ಯ ಸಚಿವಾಲಯ ಪತ್ರವನ್ನು ಕಳುಹಿಸಿದೆ.
ಮಿಜೋರಾಂನ ಕೆಲವು ಜಿಲ್ಲೆಗಳಲ್ಲಿ ಶೇ.17ರಷ್ಟು ಪಾಸಿಟಿವಿಟಿ ದರ ಇದೆ. ಮಾರ್ಗಸೂಚಿಯಂತೆ ಸೋಂಕು ತಡೆಗಟ್ಟಲು ಮತ್ತು ಸಾವಿನ ಪ್ರಮಾಣ ಇಳಿಕೆ ಮಾಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಜಮ್ಮು-ಕಾಶ್ಮೀರದ ಕಥುವಾದಲ್ಲಿ ಶೇ.736ರಷ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಕೇರಳದಲ್ಲಿ ಒಟ್ಟು 1,71,521 ಕೋವಿಡ್ ಪ್ರಕರಣಳಿವೆ. ದೇಶದಲ್ಲಿನ ಕೋವಿಡ್ ಪ್ರಕರಣಗಳಲ್ಲಿ ಕೇರಳ ರಾಜ್ಯದಿಂದ ಶೇ.55ರಷ್ಟು ಪ್ರಕರಣಗಳು ಸೇರ್ಪಡೆಯಾಗುತ್ತಿದೆ.
ಏತನ್ಮಧ್ಯೆ ಭಾರತದಲ್ಲಿ ಒಮಿಕ್ರಾನ್ ನ ಮೂರು ಪ್ರಕರಣಗಳು ಪತ್ತೆಯಾದ ನಂತರ ಹೆಚ್ಚು ಎಚ್ಚರವಹಿಸಲು ಸೂಚನೆ ನೀಡಿದೆ. ಅಲ್ಲದೇ ಕೋವಿಡ್ 19 ಸೋಂಕು ಪ್ರಕರಣಗಳಲ್ಲಿ ಹೆಚ್ಚಳವಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಪತ್ರದಲ್ಲಿ ತಿಳಿಸಿದೆ.