Advertisement

NRI ವಿವಾಹ ವಂಚನೆ ತಡೆಗೆ ವೆಬ್‌ಸೈಟ್‌ ರಚನೆ

10:15 AM Jan 02, 2018 | Team Udayavani |

ಹೊಸದಿಲ್ಲಿ: ‘ಹುಡುಗ ಅಮೆರಿಕದಲ್ಲಿದ್ದಾನೆ. ಮಗಳನ್ನು ಆತನಿಗೇ ಕೊಟ್ಟು ಮದುವೆ ಮಾಡಬೇಕು’ ಎನ್ನುವುದು ಹೆಣ್ಣು ಹೆತ್ತವರ ಆಸೆ. ಇಂಥವರು ಕೆಲವೊಂದು ಸಂದರ್ಭದಲ್ಲಿ ಮೋಸ ಹೋಗುವ ಸಾಧ್ಯತೆಗಳೂ ಇರುತ್ತವೆ. ಅಂಥ ಪ್ರಕರಣಗಳನ್ನು ತಪ್ಪಿಸಲು ಮತ್ತು ನಿಗಾ ಇರಿಸಿಕೊಳ್ಳಲು ವೆಬ್‌ಸೈಟ್‌ ಆರಂಭಿಸಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ.

Advertisement

ಈ ಬಗ್ಗೆ ‘ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ವೆಬ್‌ಸೈಟ್‌ನಲ್ಲಿ ಅನಿವಾಸಿ ಭಾರತೀಯ ವರನ ಹೆಸರು, ವಿಳಾಸ, ಆತ ಕೆಲಸ ಮಾಡುತ್ತಿರುವ ಸ್ಥಳ ಮತ್ತು ಇತರ ವಿವರಗಳು ಇರುತ್ತವೆ. ಎಷ್ಟು ಮಂದಿ ವಿದೇಶಗಳಲ್ಲಿ ಮದುವೆ ಯಾಗಿ ನೆಲೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇರದಿದ್ದರೂ 3,328 ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 3,268 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದಿದ್ದಾರೆ ಕೇಂದ್ರ ವಿದೇಶಾಂಗ ಇಲಾಖೆ ಸಹಾಯಕ ಸಚಿವ ಜ|  ವಿ.ಕೆ.ಸಿಂಗ್‌. ಭಾರತದಲ್ಲಿ ಮದುವೆಯಾಗಿ ವಿದೇಶಕ್ಕೆ ಪತ್ನಿಯನ್ನು ಕರೆದೊಯ್ದ ಬಳಿಕ ಹಿಂಸೆಗೆ ಗುರಿ ಮಾಡುವುದು, ತ್ಯಜಿಸುವಂಥ ಪ್ರಕರಣ ತಡೆಯುವ ನಿಟ್ಟಿನಲ್ಲಿ ಅದನ್ನು ಆರಂಭಿಸಲಾಗಿದೆ. ಜತೆಗೆ ಎನ್‌ಆರ್‌ಐಗಳ ವಿವಾಹಕ್ಕೆ ಸಂಬಂಧಿಸಿ ಇರುವ ಸಮಸ್ಯೆ ಬಗೆಹರಿಸಲು ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next