Advertisement

ಕೇಂದ್ರ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚು ಲಸಿಕೆಯನ್ನು ಪೂರೈಸುತ್ತಿದೆ : ದೀದಿ

05:55 PM Aug 05, 2021 | Team Udayavani |

ನವ ದೆಹಲಿ : ಕೋವಿಡ್ ಲಸಿಕೆ ಕೊರತೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

Advertisement

ಈ ಕುರಿತಾಗಿ ಪ್ರಧಾನಿ ಅವರಿಗೆ ಪತ್ರ ಬರೆದ ದೀದಿ,  ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ ಅಗತ್ಯಕ್ಕೆ ಅನುಗುಣವಾಗಿ ಲಸಿಕೆಯನ್ನು ಪೂರೈಸಲಾಗುತ್ತಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ದಿನ ನಿತ್ಯ ಹನ್ನೊಂದು ಲಕ್ಷ ಲಸಿಕೆಗಳನ್ನು ನೀಡುವ ಸಾಮರ್ಥವಿದ್ದು, ಈಗ ರಾಜ್ಯದಲ್ಲಿ ನಾಲ್ಕು ಲಕ್ಷ ಲಸಿಕೆಯನ್ನು ನೀಡಲಾಗುತ್ತಿದೆ. ಆದಾಗ್ಯೂ, ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯಕ್ಕೆ ಬೇಕಾದಷ್ಟು ಲಸಿಕೆಯನ್ನು ಪೂರೈಸಲಾಗುತ್ತಿಲ್ಲ. ಅತಿ ಹೆಚ್ಚಿನ ಜನಸಂಖ್ಯೆ ಹಾಗೂ ಹೆಚ್ಚಿನ ನಗರ ಪ್ರದೇಶಗಳನ್ನು ಹೊಂದಿರುವ ರಾಜ್ಯವಾದರೂ ಕೇಂದ್ರ ರಾಜ್ಯಕ್ಕೆ ಲಸಿಕೆಯನ್ನು ಅಗತ್ಯಕ್ಕನುಸಾರವಾಗಿ ನೀಡುತ್ತಿಲ್ಲವೆಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮಾದರಿಯಾಗಲಿದೆ ಮೆಗಾ ಮಾರುಕಟ್ಟೆ: 40 ಕೋಟಿ ವೆಚ್ಚದಲ್ಲಿ ನಿರ್ಮಾಣ

ಇನ್ನು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲಸಿಕೆಯ ವಿಚಾರದಲ್ಲಿಯೂ ರಾಜಕೀಯದ ಧೋರಣೆಯನ್ನು ತೋರಿಸುತ್ತಿದೆ. ಬಂಗಾಳವನ್ನು ನಿರ್ಲಕ್ಷಿಸಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಲಸಿಕೆಯನ್ನು ಹೆಚ್ಚು ಒದಗಿಸಲಾಗುತ್ತಿದೆ ಎಂದು ದೀದಿ ಗುಡುಗಿದ್ದಾರೆ.

Advertisement

ರಾಜ್ಯ ಈವರೆಗೆ 3.08 ಕೋಟಿ ಡೋಸ್ ನಷ್ಟು ಲಸಿಕೆಯನ್ನು ಪೂರೈಸಿದೆ. ವ್ಯರ್ಥವಾದ ಲಸಿಕೆಯ ಪ್ರಮಾಣ ಶೇಕಡಾ ಮೈನಸ್ 7 ರಷ್ಟಿದೆ. ಇಡೀ ದೇಶದಲ್ಲಿಯೇ ಲಸಿಕಾ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಪಶ್ಚಿಮ ಬಂಗಾಳ ನಿಭಾಯಿಸಿದೆ ಎಂದು ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಕೋಲ್ಕತ್ತಾ ಹೈ ಕೋರ್ಟ್ ರಾಜ್ಯಕ್ಕೆ, ಈವರೆಗೆ ನೀಡಲಾದ ಲಸಿಕೆಯ ಪ್ರಮಾಣ ಎಷ್ಟು ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಪೂರೈಸಲಾದ ಲಸಿಕೆಯ ಪ್ರಮಾಣಗಳ ಬಗ್ಗೆ ವಿವರವನ್ನು ಕೇಳಿತ್ತು. ಮಾತ್ರವಲ್ಲದೇ, ಕೋರ್ಟ್ ನ ನ್ಯಾಯಪೀಠ, ಪಶ್ಚಿಮ ಬಂಗಾಳ ರಾಜ್ಯವನ್ನು ಒಳಗೊಂಡು ಇತರೆ ರಾಜ್ಯಗಳಿಗೆ ಪೂರೈಸಲಾದ ಒಟ್ಟು ಲಸಿಕೆಗಳ ವಿವರವನ್ನು ನೀಡುವಂತೆ ಕೇಂದ್ರಕ್ಕೆ ಆದೇಶಿಸಿತ್ತು.

ಏತನ್ಮಧ್ಯೆ, ಸರ್ಕಾರದ ಮೂಲಗಳು ಹೇಳುವಂತೆ ಪಶ್ಚಿಮ ಬಂಗಾಳವು ಪ್ರಸ್ತುತ 52 ಲಕ್ಷ ಡೋಸ್‌ಗಳನ್ನು ಹೊಂದಿದೆ, ಇದು ದೇಶದ ಎರಡನೇ ಅತಿ ಹೆಚ್ಚು ಲಸಿಕೆಯ ಲಭ್ಯತೆ ಎಂದು ಹೇಳಿದೆ.

ಬಿಜೆಪಿಯೇತರ ಆಡಳಿತವಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿಯೂ ಅತಿ ಹೆಚ್ಚು ಲಸಿಕೆ ಪ್ರಮಾಣವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಸಾಮಾಜಿಕ ಜಾಲತಾಣದ ಪ್ರೇಮ : 9 ತಿಂಗಳ ಹಿಂದೆ ಮದುವೆ: ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next