Advertisement

PMAY-G: ಗ್ರಾಮೀಣ ಆವಾಸ್‌ ಯೋಜನೆಯ ಮಾನದಂಡ ಸಡಿಲಿಕೆ… ಯಾರೆಲ್ಲ ಅರ್ಹರು ಇಲ್ಲಿದೆ ಮಾಹಿತಿ

08:36 AM Sep 12, 2024 | Team Udayavani |

ನವದೆಹಲಿ: ಪ್ರಧಾನಮಂತ್ರಿ ಆವಾಸ್‌ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ)ದ ಲಾಭ ಪಡೆಯುವ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ, ದ್ವಿಚಕ್ರ ವಾಹನ, ಮೋಟಾರುಚಾಲಿತ ಮೀನುಗಾರಿಕಾ ದೋಣಿ, ರೆಫ್ರಿಜರೇಟರ್‌, ಲ್ಯಾಂಡ್‌ಲೈನ್‌ ಫೋನ್‌ ಹೊಂದಿರುವ ಕುಟುಂಬಗಳು ಮತ್ತು ತಿಂಗಳಿಗೆ 15 ಸಾವಿರ ರೂ. ಆದಾಯ ಗಳಿಸುವ ಕುಟುಂಬಗಳು ಕೂಡ ಈ ಯೋಜನೆಯ ಫ‌ಲಾನುಭವಿಗಳಾಗಬಹುದು.

Advertisement

ಹೌದು, ಗ್ರಾಮೀಣ ಗೃಹ ಯೋಜನೆಯ ಫ‌ಲಾನುಭವಿಗಳ ಆಯ್ಕೆ ವೇಳೆ ಬಳಸಲಾಗುತ್ತಿದ್ದ “ಸ್ವಯಂಚಾಲಿತ ಹೊರಗುಳಿಯುವಿಕೆ’ ಮಾನದಂಡವನ್ನು ಈಗ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಈವರೆಗೆ ಈ ಮಾನದಂಡ ಇದ್ದ ಕಾರಣ, ಹಲವರಿಗೆ ಆವಾಸ್‌ ಯೋಜನೆಯ ಅನುಕೂಲತೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇನ್ನು ಈ ಷರತ್ತುಗಳು ಸಡಿಲಿಕೆಯಾದ ಕಾರಣ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನವರು ಇದರ ಲಾಭ ಪಡೆಯಬಹುದು.

ಮಂಗಳವಾರ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಈ ಘೋಷಣೆ ಮಾಡಿದ್ದಾರೆ. ಜತೆಗೆ, ಯೋಜನೆಯಡಿ ಜಮೀನು ಸಂಬಂಧಿತ ಮಾನದಂಡವನ್ನೂ ಸಡಿಲಿಸಿರುವುದಾಗಿ ಅವರು ತಿಳಿಸಿದ್ದಾರೆ. 2028-29ರೊಳಗೆ ದೇಶಾದ್ಯಂತ ಹೆಚ್ಚುವರಿಯಾಗಿ 2 ಕೋಟಿ ಮನೆ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಯಾರು ಅನರ್ಹರು?
ಮೋಟಾರುಚಾಲಿತ ತ್ರಿಚಕ್ರ/4 ಚಕ್ರದ ವಾಹನಗಳನ್ನು ಹೊಂದಿರುವವರು, ಯಾಂತ್ರೀಕೃತ ಮೂರು/4 ಚಕ್ರದ ಕೃಷಿ ಉಪಕರಣ, 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಸಾಲ ಮಿತಿ ಹೊಂದಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಇರುವವರು, ಸರ್ಕಾರಿ ಉದ್ಯೋಗಿಯಿರುವಂಥ ಕುಟುಂಬ, ಸರ್ಕಾರದಲ್ಲಿ ನೋಂದಣಿಯಾಗಿರುವ ಕೃಷಿಯೇತರ ಉದ್ಯಮ ಹೊಂದಿರುವ ಕುಟುಂಬ, ಆದಾಯ ತೆರಿಗೆ, ವೃತ್ತಿಪರ ತೆರಿಗೆ ಪಾವತಿಸುತ್ತಿರುವ ಸದಸ್ಯರಿರುವ ಕುಟುಂಬ, 2.5 ಎಕರೆ ಅಥವಾ ಹೆಚ್ಚು ನೀರಾವರಿ ಭೂಮಿ ಹೊಂದಿರುವ ಕುಟುಂಬ.

ಇದನ್ನೂ ಓದಿ: Discovered: ಅಮೆರಿಕ ಕಂಡುಹಿಡಿದದ್ದು ಕೊಲಂಬಸ್‌ ಅಲ್ಲ, ಭಾರತೀಯ ನಾವಿಕ: ಮಧ್ಯಪ್ರದೇಶ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next