Advertisement
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2040ಕ್ಕೆ ಭಾರತ ಕೈಗೊಳ್ಳಲು ನಿರ್ಧರಿಸಿರುವ ಮಾನವ ಸಹಿತ ಚಂದ್ರಯಾನ ಯೋಜನೆಗೆ ಬುನಾದಿಯಾಗಿ ಚಂದ್ರಯಾನ-4 ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಚಂದ್ರನ ಮೇಲೆ ಇಳಿಯಲು, ಮತ್ತೆ ಅಲ್ಲಿಂದ ಉಡಾವಣೆ ಯಾಗಲು ಬೇಕಾಗುವ ಸಾಧನಗಳನ್ನು ಈ ಯೋಜನೆ ಒಳಗೊಂಡಿದೆ ಎಂದರು.
Related Articles
ಚಂದ್ರನ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರಲು ಯಶಸ್ವಿಯಾದರೆ, ಈ ಸಾಧನೆ ಮಾಡಿದ 5ನೇ ದೇಶ ಎಂಬ ಖ್ಯಾತಿಯನ್ನು ಭಾರತ ಪಡೆದುಕೊಳ್ಳಲಿದೆ. ಈಗಾಗಲೇ ರಷ್ಯಾ, ಅಮೆರಿಕ, ಜಪಾನ್ ಮತ್ತು ಚೀನ ಇದರಲ್ಲಿ ಯಶಸ್ವಿಯಾಗಿವೆ.
Advertisement
ಏನಿದು ಚಂದ್ರಯಾನ-4?ಚಂದ್ರಯಾನ-4 ಚಂದ್ರನ ಮೇಲ್ಮೆ„ಯ ಮಾದರಿಯನ್ನು ಸಂಗ್ರಹಿಸಿ ಭೂಮಿಗೆ ತರುವ ಯೋಜನೆಯಾಗಿದೆ. ಇದು ಲ್ಯಾಂಡರ್, ರೋವರ್‌ಗಳ ಜತೆಗೆ ಮರುಉಡಾವಣೆ ವಾಹನವನ್ನು ಒಳಗೊಂಡಿರಲಿದೆ. ಚಂದ್ರನ ಅಂಗಳವನ್ನು ತಲುಪಿದ ಬಳಿಕ ಅಲ್ಲಿ ಮಾದರಿಯನ್ನು ಸಂಗ್ರಹಿಸಿ, ಈ ಉಪಕರಣ ಮತ್ತೆ ಉಡಾವಣೆಗೊಂಡು ಭೂಮಿಗೆ ತಲುಪಲಿದೆ. 2028ಕ್ಕೆ ಇದನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿದೆ.