Advertisement
ಇತ್ತೀಚೆಗಷ್ಟೇ ಭೀಕರ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡಿನ 13 ಹಳ್ಳಿಗಳು ಹಾಗೂ 6 ರಾಜ್ಯಗಳ ಘಟ್ಟ ಪ್ರದೇಶಗಳು ಅಧಿಸೂಚನೆಯಲ್ಲಿ ಸೇರಿವೆ. ಈ ಅಧಿಸೂಚನೆ ಹೊರಡಿಸಿದ 60 ದಿನಗಳ ಒಳಗಾಗಿ ಸಲಹೆಗಳು ಮತ್ತು ತಕರಾರುಗಳನ್ನು ಸಲ್ಲಿಸಬಹುದಾಗಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದ ಬೆನ್ನಲ್ಲೇ ಕೇಂದ್ರ ಸರಕಾರ ಜು. 31ರಂದು ಈ ಅಧಿಸೂಚನೆ ಹೊರಡಿಸಿದೆ.
ಕಲ್ಲು ಕೋರೆ, ಗಣಿಗಾರಿಕೆ, ಮರಳುಗಾರಿಕೆ ಪೂರ್ಣ ನಿಷೇಧ. ಈಗಾಗಲೇ ಇರುವ ಗಣಿಗಾರಿಕೆ 5 ವರ್ಷಗಳಲ್ಲಿ ಸ್ಥಗಿತ. ಹೊಸ ಉಷ್ಣ ಸ್ಥಾವರ ನಿರ್ಮಾಣ ಇಲ್ಲ. ಈಗಿರುವ ಉಷ್ಣ ಸ್ಥಾವರಗಳಿಗೆ ಅಡ್ಡಿ ಇಲ್ಲ, ಆದರೆ ವಿಸ್ತರಣೆ ಇಲ್ಲ. ಬೃಹತ್ ನಿರ್ಮಾಣ ಯೋಜನೆ, ಟೌನ್‌ಶಿಪ್ ನಿಷೇಧ. ಹಾಲಿ ನಿರ್ಮಾಣಗಳ ದುರಸ್ತಿ -ನವೀಕರಣಕ್ಕೆ ಅಡ್ಡಿ ಇಲ್ಲ. ಡಾ| ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ತೀರ್ಮಾನವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜತೆ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ಮಾಡಲಾಗುವುದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ