ನವದೆಹಲಿ:ಕೋವಿಡ್ 19 ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರವನ್ನು ಮೇ 31ರವರೆಗೆ ರದ್ದುಗೊಳಿಸಿರುವ ಆದೇಶವನ್ನು ವಿಸ್ತರಿಸಿರುವುದಾಗಿ ವಾಯುಯಾನ ನಿಯಂತ್ರಕ ಡಿಜಿಸಿಎ ಶುಕ್ರವಾರ(ಏಪ್ರಿಲ್ 30) ತಿಳಿಸಿದೆ.
ಇದನ್ನೂ ಓದಿ:ಬಳ್ಳಾರಿ ಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ: ಶಾಸಕ ರೆಡ್ಡಿ ಪುತ್ರನಿಗೂ ಸೋಲು!
ಆದರೂ ಪ್ರಕರಣಗಳ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಅಂತರಾಷ್ಟ್ರೀಯ ನಿಗದಿತ ವಿಮಾನಗಳ ಸಂಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಬಹುದಾಗಿದೆ ಎಂದು ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್ ತಿಳಿಸಿರುವುದಾಗಿ ವರದಿ ಹೇಳಿದೆ.
ಈ ನಿರ್ಬಂಧ ಅಂತರಾಷ್ಟ್ರೀಯ ಸರಕು ಸಾಗಣೆ ವಿಮಾನ ಸಂಚಾರಕ್ಕೆ ಅನ್ವಯಿಸುವುದಿಲ್ಲ ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೂ ರದ್ದು ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಸೋಂಕಿನ ನಿಟ್ಟಿನಲ್ಲಿ ಭಾರತದಲ್ಲಿ 2020ರ ಮಾರ್ಚ್ 23ರಿಂದ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನವನ್ನು ರದ್ದುಗೊಳಿಸಲಾಗಿತ್ತು. ಆದರೆ ಮೇ ತಿಂಗಳ ನಂತರ ಮತ್ತು ಆಯ್ದ ದೇಶಗಳಿಂದ ಜುಲೈನಿಂದ ವಂದೇ ಭಾರತ್ ಮಿಷನ್ ನಡಿ ವಿಶೇಷ ಅಂತರಾಷ್ಟ್ರೀಯ ವಿಮಾನಗಳು ಕಾರ್ಯಾಚರಿಸಿದ್ದವು ಎಂದು ವರದಿ ತಿಳಿಸಿದೆ.
ಕೀನ್ಯಾ, ಭೂತಾನ್, ಫ್ರಾನ್ಸ್ ಸೇರಿದಂತೆ ಭಾರತ ಸುಮಾರು 27 ದೇಶಗಳೊಂದಿಗೆ ಏರ್ ಬಬ್ಬಲ್ ಒಪ್ಪಂದ ಮಾಡಿಕೊಂಡಿತ್ತು. ಎರಡು ದೇಶಗಳ ನಡುವಿನ ಏರ್ ಬಬ್ಬಲ್ ಒಪ್ಪಂದದಡಿ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ತಮ್ಮ ವಿಮಾನಗಳು ತಮ್ಮ ಮಾರ್ಗಗಳಲ್ಲಿ ಸಂಚರಿಸಬಹುದಾಗಿತ್ತು.