Advertisement

ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ

01:11 PM Aug 18, 2022 | Team Udayavani |

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ ಮತ್ತು ಸಾರ್ವಜನಿಕ ಆದೇಶಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದ ಭಾರತದ ಏಳು ಹಾಗೂ ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಚಾನೆಲ್ ಅನ್ನು ನಿಷೇಧಿಸಿರುವುದಾಗಿ ಗುರುವಾರ (ಆಗಸ್ಟ್ 18) ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

Advertisement

ಇದನ್ನೂ ಓದಿ:ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ

“ನಿಷೇಧಿಸಿರುವ ಯೂಟ್ಯೂಬ್ ಚಾನೆಲ್ ಗಳು ಸುಮಾರು 114 ಕೋಟಿ ವೀಕ್ಷಣೆಗಳನ್ನು ಹೊಂದಿದ್ದು, 85 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವುದಾಗಿ ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ವಿವರಿಸಿದೆ.

ಈ ಯೂಟ್ಯೂಬ್ ಚಾನೆಲ್ ಗಳು ಪ್ರಸಾರ ಮಾಡಿರುವ ವಿಷಯದ ಉದ್ದೇಶ ಭಾರತದಲ್ಲಿನ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಹರಡುವುದಾಗಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ನಿರ್ಬಂಧಿಸಲ್ಪಟ್ಟ ಯೂಟ್ಯೂಬ್ ಚಾನೆಲ್ಸ್ ಗಳಲ್ಲಿನ ಹಲವು ವಿಡಿಯೋಗಳಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ಉದಾಹರಣೆಗೆ, ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸಲು ಭಾರತ ಸರ್ಕಾರ ಆದೇಶ ಹೊರಡಿಸಿದೆ, ಧಾರ್ಮಿಕ ಹಬ್ಬಗಳ ಆಚರಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ…ಹೀಗೆ ಹಲವು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವುದಾಗಿ ಹೇಳಿದೆ.

Advertisement

ಇಂತಹ ಸುಳ್ಳು ಸುದ್ದಿಯಿಂದಾಗಿ ಸಮಾಜದಲ್ಲಿ ಕೋಮು ಸಾಮರಸ್ಯ ಹದಗೆಡಲಿದ್ದು ಹಾಗೂ ದೇಶದಲ್ಲಿ ಅಶಾಂತಿಗೆ ಕಾರಣವಾಗಲಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ರೀತಿ ಜಮ್ಮು-ಕಾಶ್ಮೀರ, ಭಾರತೀಯ ಸೇನೆಗೆ ಸಂಬಂಧಿಸಿದಂತೆ ಈ ಯೂಟ್ಯೂಬ್ ಚಾನೆಲ್ ಗಳು ಹಲವಾರು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವುದಾಗಿ ವರದಿ ವಿವರಿಸಿದೆ.

ಯೂಟ್ಯೂಬ್ ಚಾನೆಲ್ ಗಳಲ್ಲಿರುವ ಕಂಟೆಂಟ್, ಭಾರತದ ಸಾರ್ವಭೌಮತೆ, ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಗಳ ಜೊತೆಗಿನ ಬಾಂಧವ್ಯ, ದೇಶದಲ್ಲಿನ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಿತ್ತು. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಒಟ್ಟು ಎಂಟು ಯೂಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಷೇಧಿಸಲ್ಪಟ್ಟ ಚಾನೆಲ್ ಗಳು:

ಲೋಕತಂತ್ರ ಟಿವಿ

ಯು ಆ್ಯಂಡ್ ವಿ ಟಿವಿ

ಎಎಂ ರಾಜ್ವಿ ಚಾನಲ್

ಗೌರವಶಾಲಿ

ಸೀಟಾಪ್ 5ಟಿಎಚ್

ಸರ್ಕಾರಿ ಅಪ್ ಡೇಟ್

ಸಬ್ ಕುಚ್ ದೇಖೋ

ನ್ಯೂಸ್ ಕಿ ದುನಿಯಾ

Advertisement

Udayavani is now on Telegram. Click here to join our channel and stay updated with the latest news.

Next