Advertisement

ಕರ್ನಾಟಕ ಸೇರಿ ದೇಶದ 12 ರಾಜ್ಯಗಳಲ್ಲಿ “ಒಂದು ದೇಶ, ಒಂದು ರೇಷನ್ ಕಾರ್ಡ್” ಯೋಜನೆ ಜಾರಿ

10:11 AM Jan 02, 2020 | Nagendra Trasi |

ನವದೆಹಲಿ:ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ಹನ್ನೆರಡು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ “ಒಂದು ದೇಶ, ಒಂದು ರೇಷನ್ ಕಾರ್ಡ್” ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ತೆಲಂಗಾಣ, ಗುಜರಾತ್, ಹರ್ಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್ ಮತ್ತು ತ್ರಿಪುರಾ ರಾಜ್ಯ ಸೇರಿದೆ.

Advertisement

ಒನ್ ನೇಶನ್, ಒನ್ ರೇಷನ್ ಕಾರ್ಡ್ ಯೋಜನೆ 2020ರ ಜನವರಿ 1ರಿಂದ ಜಾರಿಯಾಗಲಿದ್ದು, ಈ ರಾಜ್ಯಗಳಲ್ಲಿರುವ ಫಲಾನುಭವಿಗಳು ತಮ್ಮ ಹಾಲಿ ರೇಷನ್ ಕಾರ್ಡ್ ನಲ್ಲಿಯೇ ಅದರ ಪಾಲಿನ ರೇಷನ್ ಲಭ್ಯವಾಗಲಿದೆ ಎಂದು ತಿಳಿಸಿದೆ. 2020ರ ಜೂನ್ ನಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿಯಾಗಲಿದೆ ಎಂದು ಹೇಳಿದೆ.

ನೂತನ ಆಹಾರ ಸರಬರಾಜು ಪ್ರಕಾರ, ನೂತನ ರೇಷನ್ ಕಾರ್ಡ್ ಗಾಗಿ ಉತ್ತಮ ಗುಣಮಟ್ಟದ ವಿನ್ಯಾಸವನ್ನು ಒದಗಿಸುವಂತೆ ರಾಜ್ಯಗಳ ಬಳಿ ಕೇಳಲಾಗಿದ್ದು, ಅದನ್ನು 2020ರ ಜೂನ್ 1ರಂದು ಬಿಡುಗಡೆಗೊಳಿಸಲಾಗುವುದು. ವಿವಿಧ ರಾಜ್ಯಗಳ ರೇಷನ್ ಕಾರ್ಡ್ ಗಳನ್ನು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಣಮಟ್ಟದ ವಿನ್ಯಾಸದಲ್ಲಿ ವಿತರಿಸಲಿವೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next