Advertisement

ಇನ್ನು ಇ- ವಹಿವಾಟಿಗೂ ಕೇಂದ್ರ ಸರಕಾರದ ನಿಗಾ

06:00 AM Jul 10, 2018 | Team Udayavani |

ಹೊಸದಿಲ್ಲಿ: ನೋಟುಗಳ ಅಮಾನ್ಯ ಮಾಡಿ, ಕಪ್ಪುಹಣದ ವಿರುದ್ಧ ಮೊದಲ ಹಂತದ ಹೋರಾಟದಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೀಗ, 2ನೇ ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ. ಅದಕ್ಕಾಗಿ ಇಲೆಕ್ಟ್ರಾನಿಕ್‌ ವಹಿವಾಟುಗಳ ಮೇಲೆ ನಿಗಾ ಇರುವ ಹೊಸ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಸುದೀರ್ಘ‌ ಚರ್ಚೆ ನಡೆಸಿದೆ. ಕಪ್ಪುಹಣ ವಹಿವಾಟು ನಡೆಸುವವರು ಬೇರೆ ಬೇರೆ ರೀತಿ ಮೂಲಕ ವಹಿವಾಟು ನಡೆಸಿ, ಅದನ್ನು ಕಂಡು ಹಿಡಿಯುವುದು ಹಾಗೂ ಆದಾಯ ತೆರಿಗೆ ಇಲಾಖೆಗೆ ಅತ್ಯಂತ ಸಂಕೀರ್ಣ ಸಂಗತಿ. ಅದನ್ನು ಪತ್ತೆ ಹೆಚ್ಚಲು ಹೊಸ ಕ್ರಮ ನೆರವಾಗಲಿದೆ. ಈ ಬಗ್ಗೆ “ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. 

Advertisement

ಅದು ದೇಶದಲ್ಲಿ ನಡೆಯುವ ಎಲ್ಲ ಡಿಜಿಟಲ್‌ ವಹಿವಾಟುಗಳ ಡೇಟಾಬೇಸ್‌ ಆಗಿರಲಿದೆ. ಇದರ ಮೂಲಕ ಹಣ ದುರ್ಬಳಕೆ ಹಾಗೂ ನಕಲಿ ಕಂಪನಿಗಳ ವಹಿವಾಟುಗಳನ್ನೂ ಪತ್ತೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ. ಇದರ ಮುಖ್ಯ ಉದ್ದೇಶವೇ ಕಾರ್ಪೊರೇಟ್‌ ವಹಿವಾಟುಗಳ ದತ್ತಾಂಶವನ್ನು ಸಂಗ್ರಹಿಸುವುದಾಗಿದೆ. ಜತೆಗೆ ವೈಯಕ್ತಿಕ ವಹಿವಾಟುಗಳ ದಾಖಲೆಯೂ ಇದರಲ್ಲಿ ಲಭ್ಯವಿರುತ್ತದೆ.

ಆದರೆ ಈ ಡೇಟಾಬೇಸ್‌ ಅನ್ನು ಯಾರು ಬೇಕಾದರೂ ಪಡೆಯಲಾಗದು. ವಿನಂತಿಯ ಮೇರೆಗೆ ನಿರ್ದಿಷ್ಟ ವಿಧದ ಡೇಟಾವನ್ನು ಪಡೆಯುವುದಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಒಂದು ಕಂಪನಿಯ  ನಿರ್ದೇಶಕರು ಮತ್ತು ಕಂಪನಿಗೆ ಸಂಬಂಧಿಸಿದ ಎಲ್ಲರ ಮಧ್ಯೆ ಹಣಕಾಸು ವಹಿವಾಟು ಅರಿಯಲು ಇದು ನೆರವಾಗುತ್ತದೆ. ಸದ್ಯದ ವ್ಯವಸ್ಥೆಯಲ್ಲಿ ಇಂತಹ ವಹಿವಾಟುಗಳ ಜಾಲವನ್ನು ಕಂಡುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಿಲ್ಲ. ಆದರೆ ಇದು ಹಣಕಾಸು ಅಕ್ರಮವನ್ನು ಪತ್ತೆ ಮಾಡಲು ಸಮರ್ಪಕವಾಗಿದೆಯೇ ಎಂಬುದು ಸ್ಪಷ್ಟವಾ ಗಿಲ್ಲ. ಯಾಕೆಂದರೆ ಹೆಚ್ಚಿನ ಕಪ್ಪು ಹಣವೆಲ್ಲ ನಗದು ರೂಪದಲ್ಲೇ ನಡೆಯುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next