Advertisement

ಕೋವಿಡ್ 19 ಖಚಿತ ಮಾಹಿತಿಗೆ ವಾಟ್ಸಪ್ ನಂಬರ್, 1 ಲಕ್ಷ ಕೋವಿಡ್ ಸೋಂಕಿತರು ಗುಣಮುಖ: ಪ್ರಧಾನಿ

11:07 AM Mar 27, 2020 | Nagendra Trasi |

ನವದೆಹಲಿ:ಕೋವಿಡ್ 19 ಮಾರಣಾಂತಿಕ ಸೋಂಕಿನ ಕುರಿತು ನಂಬಿಕಾರ್ಹ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಾಟ್ಸಪ್ ಜತೆ ಟೈ ಅಪ್ ಮಾಡಿಕೊಂಡಿದ್ದು, ಇದಕ್ಕಾಗಿ ಹೆಲ್ಫ್ ಡೆಸ್ಕ್ ನಂಬರನ್ನು ಜನರಿಗೆ ನೀಡಲಿದ್ದು, ಅದರ ಉಪಯೋಗ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.

Advertisement

ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಸಂಸತ್ ಕ್ಷೇತ್ರವಾದ ವಾರಣಾಸಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ವಾಟ್ಸಪ್ ಹೆಲ್ಫ್ ಡೆಸ್ಕ್ ನಂಬರ್ (9013151515) ತಿಳಿಸಿದ್ದರು.

ಮಹಾಭಾರತ ಮಹಾಯುದ್ಧ 18 ದಿನಗಳಲ್ಲಿ ಅಂತ್ಯ ಕಂಡಿತ್ತು. ಆದರೆ ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕೆ 21 ದಿನಗಳ ಬೇಕಾಗಿದೆ ಎಂದು 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವಂತೆ ಘೋಷಿಸಿದ್ದನ್ನು ಉಲ್ಲೇಖಿಸಿ ಈ ಉದಾಹರಣೆ ನೀಡಿರುವುದಾಗಿ ವರದಿ ತಿಳಿಸಿದೆ.

ಈವರೆಗೆ ಜಗತ್ತಿನಾದ್ಯಂತ ಸುಮಾರು ಒಂದು ಲಕ್ಷ ಮಂದಿ ಕೋವಿಡ್ 19 ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಈ ವಿಷಯವನ್ನು ಹೆಚ್ಚು ಹೈಲೈಟ್ ಮಾಡಬೇಕಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next