Advertisement
ಯುವ ಮುಖಂಡರಾದ ಚೇತನ್‌ಗೌಡ ನೇತೃತ್ವದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ಬೆಳೆಗಾರರ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರೇಷ್ಮೆ ಉದ್ದಿಮೆ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಮತ್ತು ಸಹಕಾರ ನೀಡಲು ಬದ್ಧರಾಗಿದ್ದು, 10 ದಿನದೊಳಗೆ ರೇಷ್ಮೆ ಉದ್ದಿಮೆ ಅಭಿವೃದ್ಧಿಗಾಗಿ ಮತ್ತು ಉದ್ದಿಮೆ ನೆಚ್ಚಿಕೊಂಡಿರುವ ಜನರ ಸಮಸ್ಯೆ ಆಲಿಸಲು ರೇಷ್ಮೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
Related Articles
Advertisement
ಇ ಪೇಮೆಂಟ್ ಸ್ವಾಗತ: ರೇಷ್ಮೆ ಬೆಳೆಗಾರರಿಗೆ ಸೂಕ್ತ ದರ ಮತ್ತು ಮಾರಾಟದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿಸರ್ಕಾರ ಇ-ಹರಾಜು ಮತ್ತು ಇ ಪೇಮೆಂಟ್ ವ್ಯವಸ್ಥೆಜಾರಿಗೊಳಿಸಿರುವುದು ರೀಲರ್ ಸ್ವಾಗತಿಸಿದ್ದಾರೆ. ಆದರೆ,ಈ ವ್ಯವಸ್ಥೆಯಲ್ಲಿ ಕೆಲವೊಂದು ಲೋಪದೋಷಗಳಿದ್ದು,ಸರಿಪಡಿಸುವ ಮೂಲಕ ರೇಷ್ಮೆಗೂಡು ಖರೀದಿಗೆ ಸುಲಭ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಅಗತ್ಯ ನೆರವು ನೀಡಲು ಮನವಿ: ರಾಜ್ಯದಲ್ಲಿ 30 ಸಾವಿರ ಕಾಟೇಜ್ ಬೇಸಿನ್ ಮತ್ತು ಚರಕಗಳಿದ್ದು, ಅದರಲ್ಲಿ 50 ಸಾವಿರ ನೂಲು ಬಿಚ್ಚಾಣಿಕೆದಾರಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ರೇಷ್ಮೆ ನೂಲು ಬಿಚ್ಚಾಣಿಕೆದಾರರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಬೇಕಾಗಿದೆ. ರೇಷ್ಮೆ ಉಪಉತ್ಪನ್ನಗಳಿಗಾಗಿ ಪ್ರತ್ಯೇಕ ಯೋಜನೆಯನ್ನುರೂಪಿಸಿ ಉದ್ಯೋಗ ಅವಕಾಶವನ್ನು ಸೃಷ್ಟಿಸಲು ಅವಕಾಶ ಕಲ್ಪಿಸಬಹುದಾಗಿದೆ. ಜೊತೆಗೆ ನೂಲು ಬಿಚ್ಚಾಣಿಕೆದಾರರ ಆದಾಯ ಹೆಚ್ಚಿಸಬಹುದಾಗಿದೆ ಎಂದು ಮನವಿ ಮಾಡಿ, ರೇಷ್ಮೆಯನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಿ ಸೂಕ್ತ ರೀತಿಯ ರಿಯಾಯ್ತಿ ಮತ್ತು ಅಗತ್ಯ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದರು.
ರೇಷ್ಮೆ ಉದ್ದಿಮೆ ನಂಬಿದವರ ರಕ್ಷಿಸಿ: ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಮಳ್ಳೂರುಶಿವಣ್ಣ ಮಾತನಾಡಿ, ರೇಷ್ಮೆ ಉದ್ದಿಮೆಯನ್ನುನೆಚ್ಚಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈಉದ್ದಿಮೆಯನ್ನು ಉಳಿಸಿ ಅಭಿವೃದ್ಧಿಗೊಳಿಸುವ ಮೂಲಕರೇಷ್ಮೆ ಬೆಳೆಗಾರರು ನೂಲು ಬಿಚ್ಚಾಣಿಕೆದಾರರು, ಕೂಲಿಕಾರ್ಮಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ವಿವರಿಸಿದರು.
ಖಾಲಿ ಹುದ್ದೆಗಳ ಭರ್ತಿ ಮಾಡಿ: ರೇಷ್ಮೆ ಕಾಯ್ದೆ ತಿದ್ದುಪಡಿಯಿಂದ ಖಾಸಗಿ ಮಾರುಕಟ್ಟೆಗಳಿಗೆ ಅವಕಾಶಕಲ್ಪಿಸಿದ್ದರಿಂದ ಬೆಳೆಗಾರರಿಗೆ ತೊಂದರೆಯಾಗಿದ್ದು,ಅದನ್ನು ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರಲ್ಲದೆ, ರಾಜ್ಯದಲ್ಲಿ ರೇಷ್ಮೆ ಇಲಾಖೆಯಲ್ಲಿರುವ2344 ಹುದ್ದೆಗಳು ರದ್ದುಗೊಳಿಸಬೇಕೆಂದು ಹಣಕಾಸು ಇಲಾಖೆ ಮುಂದಾಗಿದೆ. ಅದನ್ನು ಕೂಡಲೇ ಸರ್ಕಾರಕೈ ಬಿಡಬೇಕು, ಖಾಲಿ ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕಚೇತನ್‌ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆಕೃಷಿ ರಕ್ಷಣಾ ವೇದಿಕೆ ಕಾರ್ಯದರ್ಶಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.