ನವದೆಹಲಿ: ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಮಹತ್ವಾಕಾಂಕ್ಷಿ ಯೋಜನೆಯ ವ್ಯಾಪ್ತಿಗೆ ಬರುವ, 1,753 ಮರಗಳನ್ನು ಕತ್ತರಿಸದೆ, ಬೇರೆಡೆ ಸ್ಥಳಾಂತರಿಸಲಾಗುತ್ತದೆ. ಈಗಾಗಲೇ, ಯೋಜನಾ ವ್ಯಾಪ್ತಿಯಲ್ಲಿ 2,000 ಸಸಿಗಳನ್ನು ನೆಡಲಾಗಿದೆ.
ಯೋಜನೆಯ ವ್ಯಾಪ್ತಿಯಲ್ಲಿ ಒಟ್ಟು 36,083 ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. 3,230 ಮರಗಳನ್ನು ಬದರ್‌ಪುರದಲ್ಲಿರುವ ಎನ್‌ಟಿಪಿಸಿ ಇಕೋ ಪಾರ್ಕ್‌ಗೆ ಸ್ಥಳಾಂತರಿಸಲಾಗುತ್ತದೆ.
ನಗರದ ವ್ಯಾಪ್ತಿಯಲ್ಲಿ ಒಟ್ಟು 36,083 ಗಿಡಗಳನ್ನು ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಈಗ ಸದ್ಯಕ್ಕೆ ಯೋಜನೆಯ ಅನುಷ್ಠಾನದ ಜೊತೆ ಜೊತೆಗೆ, ಕೆಲವು ಮರಗಳನ್ನು ಸ್ಥಳಾಂತರಿಸುವ ಹಾಗೂ ಸ್ಥಳ ಲಭ್ಯವಿರುವ ಕಡೆ ಹೊಸ ಸಸಿಗಳನ್ನು ನಡೆಸುವ ಕಾರ್ಯ ಭರದಿಂದ ಸಾಗುತ್ತಿದೆ.
ಅಂಕಿ-ಅಂಶ:
36,083 - ಯೋಜನೆಯಡಿ ಬೆಳೆಸಲು ಉದ್ದೇಶಿಸಲಾಗಿರುವ ಮರಗಳು
32,330 – ಸ್ಥಳಾಂತರಗೊಳಿಸಲು ಉದ್ದೇಶಿಸಲಾಗಿರುವ ಒಟ್ಟು ಮರಗಳು
2,000 – ಯೋಜನಾ ಜಾಗದಲ್ಲಿ ಈಗಾಗಲೇ ನೆಡಲಾಗಿರುವ ಸಸಿಗಳ ಸಂಖ್ಯೆ