Advertisement

ಕೇಂದ್ರೀಯ ವಿದ್ಯಾಲಯ ಕಟ್ಟಡ ತೆರವಿಗೆ ಕೊಕ್‌ 

08:36 PM Oct 13, 2021 | Team Udayavani |

ವರದಿ: ಶಿವಶಂಕರ ಕಂಠಿ

Advertisement

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಬಳಿ ಕಾಣಿಸಿಕೊಂಡು ಜನರಲ್ಲಿ ಭೀತಿ ಸೃಷ್ಟಿಸಿದ್ದ ಚಿರತೆ ಸೆರೆಗೆ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಚಿರತೆಯ ವಾಸಸ್ಥಾನವಾಗಿದ್ದ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ.1ರ ಹಳೆಯ ಕಟ್ಟಡ ತೆರವಿಗೆ ಮುಂದಾಗಿತ್ತು. ಆದರೆ ಈ ಕಾರ್ಯ ಪೂರ್ಣಗೊಳ್ಳದೆ ಅವಶೇಷಗಳು ಹಾಗೇ ಉಳಿದಿದ್ದು, ಇಲ್ಲಿಯವರೆಗೆ ತೆರವು ಮಾಡಲು ತಗುಲಿದ ಖರ್ಚು ವಿದ್ಯಾಲಯದಿಂದ ಪಾವತಿಯಾಗದ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.

ರಾಜನಗರದ ಕೇಂದ್ರೀಯ ವಿದ್ಯಾಲಯವು ಸುಮಾರು 17 ಎಕರೆ ಪ್ರದೇಶದಲ್ಲಿದ್ದು, ಹೊಸ ಕಟ್ಟಡ ನಿರ್ಮಾಣದ ನಂತರ ಹಳೇ ಕಟ್ಟಡ ಹಾಗೇ ಉಳಿದುಕೊಂಡಿತ್ತು. ಆದರೆ ಈ ಕಟ್ಟಡವನ್ನು ಚಿರತೆ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರಿಂದ ಜಿಲ್ಲಾಡಳಿತವು ಪಾಲಿಕೆ ಮೂಲಕ ತೆರವುಗೊಳಿಸಲು ಮುಂದಾಗಿತ್ತು.

ಚಿರತೆ ಈ ಸ್ಥಳದಲ್ಲಿರುವ ಕುರಿತು ಯಾವುದೇ ಕುರುಹುಗಳು ಸಿಗದೆ, ಧಾರವಾಡದ ಬಳಿ ಕವಲಗೇರಿಯಲ್ಲಿ ಕಾಣಿಸಿಕೊಂಡಿರುವುದು ದೃಢಪಡುತ್ತಿದ್ದಂತೆ ಇಲ್ಲಿನ ಕಾರ್ಯಾಚರಣೆ ಅಲ್ಲಿಗೆ ಸ್ಥಳಾಂತರಗೊಂಡಿತ್ತು. ಎರಡೂ ಕಡೆ ದೊರೆತಿದ್ದ ಚಿರತೆಯ ಲದ್ದಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರ ನಡುವೆ ಕವಲಗೇರಿಯಲ್ಲಿ ಚಿರತೆ ಸೆರೆಹಿಡಿಯಲಾಗಿತ್ತು. ಆದರೆ ಎರಡು ಕಡೆ ಸಿಕ್ಕ ಗುರುತು ಹಾಗೂ ಲದ್ದಿ ಒಂದೇ ಚಿರತೆಯದ್ದು ಎನ್ನುತ್ತಿದ್ದಂತೆ ವಿದ್ಯಾಲಯದಲ್ಲಿ ನಡೆಯುತ್ತಿದ್ದ ಹಳೇ ಕಟ್ಟಡ ತೆರವು ಕಾರ್ಯಾಚರಣೆ ಮೊಟುಕುಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next