ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಅಧ್ಯಯನ ಮಾಡಲು ಶನಿವಾರ ಆಗಮಿಸಿದ್ದ ಕೇಂದ್ರ ವಿಪತ್ತು ಅಧ್ಯಯನ ತಂಡದ ಮುಖ್ಯಸ್ಥ ಸುಶಿಲ್‌ಪಾಲ್ (ಮುಖ್ಯ ನಿಯಂತ್ರಕರು, ಕೇಂದ್ರ ಲೆಕ್ಕಪತ್ರ), ತಂಡದ ಸದಸ್ಯ ಸುಭಾಷ್‌ಚಂದ್ರ (ನಿರ್ದೇಶಕರು, ಕೇಂದ್ರ ಕೃಷಿ ಇಲಾಖೆ) ವಿವಿಧ ತಾಲೂಕುಗಳಿಗೆ ಭೇಟಿ ನೀಡಿ, ಬೆಳೆ, ಕುಸಿದು ಬಿದ್ದಿರುವ ಮನೆಗಳನ್ನು ವೀಕ್ಷಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮಕ್ಕೆ ಭೇಟಿ ನೀಡಿ ಹಾನಿ ಆಗಿರುವ ರಾಗಿ, ಜೋಳ, ತೊಗರಿ ಬೆಳೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಈ ವೇಳೆ ಅಜ್ಜವಾರಗ್ರಾಮದ ರೈತರೊಬ್ಬರು ಹೊಲದಲ್ಲಿ ಜಿಲ್ಲಾಡಳಿತ ನಿರ್ಮಿಸಿದ್ದ ಫೋಟೋ ಗ್ಯಾಲರಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಳೆ ಹಾನಿ ಬಗ್ಗೆ ವಿವರಿಸಿದ್ದು, ಜಿಲ್ಲಾಡಳಿತದ ಕ್ರಮವು ಐ.ಎಂ.ಸಿ. ತಂಡದ ಗಮನ ಸೆಳೆಯಿತು.
ಸರ್ವೇಕ್ಷಣೆ ಮಾಡಿ ಮಾಹಿತಿ ಸಂಗ್ರಹ: ಅಜ್ಜವಾರ ಗ್ರಾಮದಲ್ಲಿ ರಾಗಿ, ಜೋಳ ಬೆಳೆ ಹಾನಿ ಆಗಿರುವುದನ್ನು ವೀಕ್ಷಿಸಿದ ಕೇಂದ್ರ ತಂಡ, ಶಿಡ್ಲಘಟ್ಟ ತಾಲೂಕಿನಚೌಡಸಂದ್ರ ಗ್ರಾಮಕ್ಕೆ ಭೇಟಿ ನೀಡಿ ರಾಗಿ, ಜೋಳದ ಬೆಳೆ. ನಂತರ ಶಿಡ್ಲಘಟ್ಟ ನಗರದ ಕುರುಬರಪೇಟೆ ಮನೆಹಾನಿಯನ್ನು ವೀಕ್ಷಿಸಿತು. ಆನಂತರ ಚಿಕ್ಕಬಂದರಘಟ್ಟಮತ್ತು ದೊಡ್ಡಬಂದರಘಟ್ಟ ಗ್ರಾಮಗಳ ವ್ಯಾಪ್ತಿಯಲ್ಲಿರಸ್ತೆ, ಸೇತುವೆ ಹಾನಿ ಆಗಿರುವುದನ್ನು ಸರ್ವೇಕ್ಷಣೆ ಮಾಡಿ ಕೇಂದ್ರ ತಂಡ ಮಾಹಿತಿ ಪಡೆಯಿತು.
ಸೌತೆ, ಗಡ್ಡೆ ಕೋಸು ನಾಶ: ನಂತರ ಶಿಡ್ಲಘಟ್ಟ ತಾಲೂಕಿನ ಪಿಲ್ಲಗುಂಡ್ಲಹಳ್ಳಿ ವ್ಯಾಪ್ತಿಯಲ್ಲಿ ತಂಡವು ತೋಟಗಾರಿಕೆಮತ್ತು ಕೃಷಿ ಬೆಳೆ ಹಾನಿಯನ್ನು ಪರಿಶೀಲನೆ ಮಾಡಿತು. ಈವೇಳೆ ರೈತರಾದ ತಿಮ್ಮರಾಜು, ನರಸಿಂಹರೆಡ್ಡಿ ಮಳೆಯಿಂದಾಗಿ ಸೌತೆಕಾಯಿ, ಗಡ್ಡೆ ಕೋಸು ಹಾನಿಆಗಿರುವ ಬಗ್ಗೆ ತಮಗೆ ಆದ ನೋವನ್ನು ತಂಡದ ಮುಂದೆ ತೋಡಿಕೊಂಡರು. ಕೊನೆಯದಾಗಿ ಶಿಡ್ಲಘಟ್ಟ ತಾಲೂಕಿನಅಗ್ರಹಾರ ಕೆರೆ ಏರಿ ಹಾನಿ ಆಗಿರುವುದನ್ನು ತಂಡವು ಪರಿಶೀಲನೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಬಾವರೆಡ್ಡಿ ಅವರು ಅಚ್ಚುಕಟ್ಟು ಪ್ರದೇಶದ ರೈತರ ಪರ ಮನವಿ ಸಲ್ಲಿಸಿ, ಮಣ್ಣಿನ ಸವಕಳಿ, ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ತಂಡಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮನೋಜ್‌ರಾಜನ್,ಅಪರ ಕೃಷಿ ನಿರ್ದೇಶಕ ಬಿ.ಬಸವರಾಜು, ಅಪರತೋಟಗಾರಿಕಾ ನಿರ್ದೇಶಕ ಬಿ.ಕೆ.ದುಂಡಿ, ಡೀಸಿ ಆರ್. ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಎಸಿ ಎ.ಎನ್.ರಘು ನಂದನ್,ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಜಂಟಿ ಕೃಷಿನಿರ್ದೇಶಕಿ ಎಲ್.ರೂಪಾ, ತೋಟಗಾರಿಕೆ ಉಪನಿರ್ದೇಶಕ ರಮೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.