ಹಳೇಬೀಡು: ಬೇಲೂರು-ಹಳೇಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವಂತೆ ಶಿಪಾರಸ್ಸು ಮಾಡಿದ ಹಿನ್ನೆಲೆ, ಕೇಂದ್ರದ ಪುರಾತತ್ವಇಲಾಖೆ ಅಧಿಕಾರಿಗಳ ತಂಡ ಹಳೇಬೀಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಾತತ್ವ ಇಲಾಖೆ ಅಧಿಕಾರಿಗಳ ಜತೆಆಗಮಿಸಿದ ಸಕಲೇಶಪುರದ ಉಪ ಭಾಗಾಧಿಕಾರಿಪ್ರತೀಕ್ ಬಾಯಲ್ ಸುದ್ದಿಗಾರರೊಂದಿಗೆಮಾತನಾಡಿದರು. ಹಳೇಬೀಡು ಬೇಲೂರುಹಾಗೂ ಸೋಮನಾಥಪುರದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ
ದೇವಾಲಯಗಳನ್ನು 2022 ಹಾಗೂ 2023 ನೇವರ್ಷದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲುಈಗಾಗಲೇ ತಾತ್ಕಾಲಿಕ ಪಟ್ಟಿ ಯಲ್ಲಿ ಶಿಪಾರಸ್ಸುಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆಇನ್ನು 3 ತಿಂಗಳಲ್ಲಿ ಅಮೆರಿಕದಿಂದ ಯುನೆಸ್ಕೋತಂಡ ಆಗಮಿಸಲಿದ್ದು, ಈ ಕಾರಣದಿಂದಲೇಭಾರತದ ಪುರಾತತ್ವ ಸಂರಕ್ಷಣಾ ಇಲಾಖೆ ಆದೇಶದಮೇರೆಗೆ ಅಧಿಕಾರಿಗಳ ತಂಡ ಮೊದಲುಹಳೇಬೀಡು ಮತ್ತು ಬೇಲೂರು ದೇವಾಲಯಗಳಿಗೆಭೇಟಿ ನೀಡಿದೆ. ಇಲ್ಲಿರುವ ಸಣ್ಣಪುಟ್ಟ ವ್ಯತ್ಯಾಸ ಸರಿಪಡಿದಸುವಂತೆ ಸಂಬಂಧಪಟ್ಟ ಇಲಾಖೆಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದುತಿಳಿಸಿದರು.
ಅಧಿಕಾರಿಗಳ ಕಾಟಾಚಾರದ ಭೇಟಿ: ಕೇಂದ್ರಪುರಾತತ್ವ ಇಲಾಖೆ ಮಹಾ ನಿರ್ದೇಶಕಿ ವಿ.ವಿದ್ಯಾವತಿ ಹಳೇಬೀಡಿ ಗೆ ಕಾಟಾಚಾರಕ್ಕೆ ಭೇಟಿಎಂಬಂತೆ ದೇವಾಲಯಕ್ಕೆ ಭೇಟಿ ನೀಡಿ, ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯದ ದೇವಾಲಯವನ್ನು ವೀಕ್ಷಣೆ ಮಾಡಿದರು.
ತರಾತುರಿಯಲ್ಲಿ ಬೇಲೂರು ಕಡೆ ತೆರಳಿದರು.ಇದು ಸ್ಥಳೀಯ ಜನಪ್ರತಿನಿಧಿಗಳಿ ಗೆ ಹಾಗೂಜನಸಾಮಾನ್ಯರ ಆಕ್ರೋಶಕ್ಕೂ ಕಾರವಾಯಿತು.ಬಂದ ಪುಟ್ಟ, ಹೋದ ಪುಟ್ಟ ಎಂಬಂತೆದೇವಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನೆಪದಲ್ಲಿವಾಪಸ್ಸು ಹೋಗಿದ್ದಾರೆ. ಇದರಿಂದ ಸ್ಥಳೀಯರಿಗೆಯಾವ ಮಾಹಿತಿ ಸಿಗುತ್ತದೆ?ಜತೆಗೆ ಯುನೆಸ್ಕೋ ಪಟ್ಟಿಗೆ ಹೊಯ್ಸಳೇಶ್ವರ ದೇವಾಲಯ ಸೇರಿದರೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎಷ್ಟು ಪ್ರದೇಶಆಕ್ರಮಿಸಿಕೊಳ್ಳುತ್ತಾರೆ? ಏನೆಲ್ಲ ಸೌಲಭ್ಯಹಳೇಬೀಡಿಗೆ ದೊರೆಯುತ್ತದೆ ಎಂಬುದರ ಬಗ್ಗೆಸ್ಥಳೀಯ ಜನತೆಗೆ ಆತಂಕ. ಇದರ ಬಗ್ಗೆ ಯಾವುದೇಮಾಹಿತಿ ನೀಡದೇ ತೆರಳಿದ ವಿದ್ಯಾವತಿಯವರಬಗ್ಗೆ ಸ್ಥಳೀಯರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರಿಗೆ ಮಾಹಿತಿ ನೀಡದ ಅಧಿಕಾರಿ: ಭಾರತ ಪುರಾತತ್ವ ಸಂರಕ್ಷಣಾ ಇಲಾಖೆ ಮಹಾ ನಿರ್ದೇಶಕಿ ವಿ.ವಿದ್ಯಾವತಿ ಸುದ್ದಿಗಾರರು ಕೇಳಿದಪ್ರಶ್ನೆಗೆ ಉತ್ತರಿಸದೇ, ಪೋಟೋ ತೆಗೆಯಬೇಡಿ ಎಂದರು.
ಅಲ್ಲದೇ ಭೇಟಿ ಉದ್ದೇಶದ ಮಾಹಿತಿ ನೀಡಲು ನಿರಾಕರಿಸಿದರು. ಜೊತೆಗೆಮಾಧ್ಯಮದವರ ಮೇಲೆ ಗರಂ ಆದ ಮೇಡಂತಮ್ಮ ತಂಡದೊಂದಿಗೆ ವಾಹನ ಏರಿ ಬೇಲೂರಿಗೆಹೊರಟರು. ಇದು ಮಾದ್ಯಮದವರಿಗೆ ಸರಿಯಾದ ಮಾಹಿತಿ ಸಿಗಲಿಲ್ಲ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್, ಎಎಸ್‌ಐ ರಿಜನಲ್ ಡೈರಕ್ಟರ್ ಬಿಪಿನ್‌ಚಂದ್ರ, ಪುರಾತತ್ವ ಇಲಾಖೆಯ ಡೆಪ್ಯೂಟಿ ಡೈರಕ್ಟರ್ ಸಂಜಯ್, ಸ್ಟೇಟ್ ಆರ್ಕಾ ಲಜಿ ಕುಮಾರ್, ಗ್ರಾಪಂ ಪಿಡಿಒ ಅಧಿಕಾರಿ ರವಿಕುಮಾರ್‌ಅಧ್ಯಕ್ಷರಾದ ಗೀತಾ ಅರುಣ್, ಸದಸ್ಯರಾದ ಸುರೇಶ್, ಚಂದ್ರಶೇಖರ್, ರಮೇಶ್, ಮಧು, ರಘುನಾಥ್, ಅನಿಲ್ ಸೇರಿದಂತೆ ಹಲವರಿದ್ದರು.
ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ರೆ ಸ್ಥಳೀಯವಾಗಿ ಅಭಿವೃದ್ಧಿ : ಹಳೇಬೀಡು ಮತ್ತು ಬೇಲೂರು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ. ಇಲ್ಲಿಗೆ ದೇಶವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯ ಸವಿದು ಹಿಂದಿರುಗುತ್ತಾರೆ.ಇಂತಹ ಪ್ರೇಕ್ಷಣೀಯ ಸ್ಥಳ ವಿಶ್ವ ಪಾರಂಪರಿಕಪಟ್ಟಿಗೆ ಸೇರಿಸಿದರೆ ಸ್ಥಳೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.