Advertisement

ಖಾಸಗಿ ರೈಲುಗಳಿಗೆ ಕೇಂದ್ರದ ನಿಬಂಧನೆ

10:28 AM Jan 09, 2020 | Team Udayavani |

ನವದೆಹಲಿ: ದೇಶೀಯ ರೈಲು ಮಾರ್ಗಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವ ಸಂಬಂಧ ನೀತಿ ಆಯೋಗ ರೂಪಿಸಿರುವ ಕರಡು ಪ್ರತಿಯಲ್ಲಿ ಖಾಸಗಿ ರೈಲುಗಳ ಸಂಚಾರಕ್ಕೆ ಕೆಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ.

Advertisement

ಈ ಕರಡು ಪ್ರತಿಯನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದರಂತೆ, ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುವ ಖಾಸಗಿ ರೈಲು ಅದೇ ಮಾರ್ಗದಲ್ಲಿ ಸಂಚರಿಸುವ ಇನ್ನಿತರ ರೈಲುಗಳಿಗಿಂತ 15 ನಿಮಿಷ ಮೊದಲೇ ನಿಲ್ದಾಣವನ್ನು ಬಿಡಬೇಕು. ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಲು ಮಾತ್ರ ಅವಕಾಶ ಹಾಗೂ ಪ್ರತಿಯೊಂದು ಖಾಸಗಿ ರೈಲು ತನ್ನದೇ ಆದ ಗಾರ್ಡ್‌ ಮತ್ತು ಸಿಬ್ಬಂದಿಯ ವ್ಯವಸ್ಥೆಯನ್ನು ಹೊಂದಿರಬೇಕು ಎಂಬಿತ್ಯಾದಿ ಅಂಶಗಳನ್ನು ಕರಡು ಪ್ರತಿಯಲ್ಲಿ ಸೇರಿಸಲಾಗಿದೆ.

ಆರಂಭಿಕ ಹಂತದಲ್ಲಿ ದೇಶದ 100 ಆಯ್ದ ರೈಲು ಮಾರ್ಗಗಳಲ್ಲಿ 150 ಖಾಸಗಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದ್ದು, ಇದರಿಂದ 22,500 ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next