Advertisement

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ: ಎಚ್‌.ಡಿ.ಕುಮಾರಸ್ವಾಮಿ

03:09 PM Aug 07, 2021 | Team Udayavani |

ರಾಮನಗರ: ಮೇಕೆದಾಟು ಸೇರಿದಂತೆ ಯಾವ ಯೋಜನೆಯ ವಿಚಾರದಲ್ಲಿಯೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನ್ಯಾಯ ದೊರಕಿಲ್ಲ ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಬಿಡದಿ ಬಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳನ್ನು ರಾಜ್ಯದ
ಜನರು ಸೂಕ್ಷ್ಮ ವಾಗಿ ಗಮನಿಸ ಬೇಕು. ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದಾಗಿ, ಖುದ್ದು ಅವರೆ ಡಿ.ಪಿ.ಆರ್‌ ಸಿದ್ಧಪಡಿಸುವಂತೆ ತಮಗೆ ಸೂಚಿಸಿದ್ದರು. ಡಿಪಿಆರ್‌ನ್ನು ಸಲ್ಲಿಸಲಾಗಿತ್ತು. ಮೊನ್ನೆ ಮೇಕೆದಾಟು ವಿಚಾರದಲ್ಲಿ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣರವರು ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಯೋಜನೆಗೆ ಒಪ್ಪಿಗೆಕೊಟ್ಟಿಲ್ಲ ಎಂದಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದವರು ಏನು ಮಾಡಿದರೂ ಒಪ್ಪಿಕೊಳ್ಳುತ್ತಾರೆ ಎನ್ನುವ ಮನೋಭಾವನೆ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಗಳು ಹೊಂದಿವೆ. ಕರ್ನಾಟಕ ಅಂದರೆ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಪರಿಗಣಿಸಿವೆ.

ಈ ಹಿಂದೆ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಬೆಂಗಳೂರಿಗೆಕುಡಿಯುವ ನೀರಿಗಾಗಿ 9 ಟಿಎಂಸಿ ಬಳಕೆಗೆ ಬೆಂಬಲ ನೀಡಲಿಲ್ಲ. ಅಂತಿಮ
ವಾಗಿ ದೇವೇಗೌಡರು ಪ್ರಧಾನಿಯಾದಾಗ ಅನುಮತಿ ನೀಡಿದರು ಎಂದು ಹೇಳಿದರು.

ಇದನ್ನೂ ಓದಿ:ನನ್ನ ಮೇಲೆ ಬಹಳ‌ ದೊಡ್ಡ ಹೊಣೆಗಾರಿಕೆ ಹೊರಿಸಿದ್ದಾರೆ: ಗೃಹ ಸಚಿವ ಅರಗ ಜ್ಞಾನೆಂದ್ರ

Advertisement

ರಾಜ್ಯಪಾಲರ ಭೇಟಿ: ಮೇಕೆದಾಟು ಯೋಜನೆ ಜಾರಿಗಾಗಿ ಜೆಡಿಎಸ್‌ ಪಕ್ಷ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆ ಜಾರಿಗೆ ಶತಸಿದ್ಧ ಎಂದಿದ್ದಾರೆ. ಅವರ ಯಾವ ರೀತಿ ಮುಂದುವರಿಯುತ್ತಾರೆ ಕಾದು ನೋಡೋಣ ಎಂದು ಕುಮಾರಸ್ವಾಮಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಸಹಜ ಪ್ರಕ್ರಿಯೆ: ಬಿಜೆಪಿ ನಾಯಕ ಸಂಸದ ಶ್ರೀನಿವಾಸ್‌ ಪ್ರಸಾದ್‌ ರಾಜಕೀಯ ನಿವೃತ್ತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಲ್ಲರೂ ಸಹ ಇವತ್ತಲ್ಲ ನಾಳೆ ನಿವೃತ್ತಿ ಅಗಲೇ ಬೇಕು. ಆರೋಗ್ಯದ ತೊಂದರೆ, ವಯಸ್ಸಿನ ಹಿನ್ನೆಲೆ ನಿವೃತ್ತಿ ಪಡೆಯಬೇಕು. ಮುಂದೆ ಒಂದು ದಿನ ತಾವು ಸಹ ನಿವೃತ್ತಿ ಪಡೆಯಬೇಕು. ಇದು ಸಹಜ ಪ್ರಕ್ರಿಯೆ ಎಂದು ಹೇಳಿದರು.

ಜಮೀರ್‌ ವಿರುದ್ಧ ದೂರು ಕೊಟ್ಟಿಲ್ಲ: ಕಾಂಗ್ರೆಸ್‌ ಶಾಸಕ ಜಮೀರ್‌ ಆಹಮದ್‌ ಖಾನ್‌ ‌ಮನೆಯ ಮೇಲೆ ಇಡಿ ದಾಳಿ ಮತ್ತು ಯಾರೋ ಕೊಟ್ಟಿದ್ದಾರೆ ಎಂದು ಜಮೀರ್‌ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಜಮೀರ್‌ ವಿರುದ್ಧ ದೂರು ನೀಡಿವರು ಯಾರೆಂಬುದು ನನಗೆ ಗೊತ್ತಿಲ್ಲ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಗೊತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಕೆಲ ಸಂಸ್ಥೆಗಳಿಗೆ ಮೂಗರ್ಜಿ ಬರೆಯುತ್ತಾರೆ. ಆಗ ಈ ರೀತಿಯ ರೇಡ್‌ಗಳು ನಡೆಯುತ್ತವೆ. ತಮ್ಮ ತೋಟದ ಜಮೀನಿನ ವಿಚಾರದಲ್ಲಿಯೂ ದಾಳಿಯಾಗಿತ್ತು. 25 ವರ್ಷಗಳ ಕಾಲ ತಮಗಾದ ಕಷ್ಟ, ಕಾಟ ತಮಗೆ ಮಾತ್ರ ಗೊತ್ತು. ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ. ಆದರೆ, ವ್ಯವಹಾರದ ದಾಖಲೆಗಳು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next