ಹೊಸದಿಲ್ಲಿ: ಇನ್ನು ಮುಂದೆ ಅಡುಗೆ ಅನಿಲ ಸಬ್ಸಿಡಿ ದೇಶದ ಜನರ ಖಾತೆಯಲ್ಲಿ ಜಮೆ ಆಗುವುದಿಲ್ಲ.
ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಜಾಗತಿಕ ಮಟ್ಟದಲ್ಲಿ ತೈಲ ದರ ಕುಸಿತ ಹಾಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿನ ನಿಯಮಿತ ಏರಿಕೆಯಿಂದಾಗಿ ಎಲ್‌ಪಿಜಿ ದರವು ಮಾರುಕಟ್ಟೆ ದರಕ್ಕೆ ಸಮವಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರಕಾರ ಘೋಷಿಸಿದೆ.
ಸೆ. 1ರಂದು ಸಬ್ಸಿಡಿಸಹಿತ ಮತ್ತು ಸಬ್ಸಿಡಿರಹಿತ 14.2 ಕೆಜಿ ಅಡುಗೆ ಅನಿಲದ ದರವು ಸಿಲಿಂಡರ್‌ಗೆ 594 ರೂ. ಆಗಿದೆ.
ಹೀಗಾಗಿ ಖಾತೆಗೆ ನೇರ ವರ್ಗಾವಣೆಯ ರೂಪದಲ್ಲಿ ಇನ್ನು ಮುಂದೆ ಫಲಾನುಭವಿಗಳಿಗೆ ಸಬ್ಸಿಡಿಯನ್ನು ನೀಡುವ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ.