Advertisement

ಕರ್ನಾಟಕ ನೆರೆ ಪರಿಸ್ಥಿತಿ : ಕೇಂದ್ರದಿಂದ 1200 ಕೋಟಿ ಪರಿಹಾರ ಪ್ರಕಟ

09:47 AM Oct 05, 2019 | Team Udayavani |

ನವದೆಹಲಿ: ಭೀಕರ ನೆರೆಗೆ ತುತ್ತಾಗಿದ್ದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಪರಿಹಾರ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಕೇಂದ್ರ ಸರಕಾರವು ಮಧ್ಯಂತರ ಪರಿಹಾರ ಧನವಾಗಿ 1200 ಕೋಟಿ ರೂಪಾಯಿಗಳನ್ನು ಇಂದು ಘೋಷಣೆ ಮಾಡಿದೆ.

Advertisement

ವಿಚಿತ್ರವೆಂದರೆ ಈ ಬಾರಿ ಕರ್ನಾಟಕದಲ್ಲಿ ಸಂಭವಿಸಿದ್ದ ಭೀಕರ ನೆರೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಜೀವ ಮತ್ತು ಸ್ವತ್ತು ಹಾನಿ ಸಂಭವಿಸಿತ್ತು. ನೆರೆ ಪರಿಸ್ಥಿತಿ ಅಧ್ಯಯನ ಮಾಡಿದ್ದ ಕೇಂದ್ರದ ತಂಡವೂ ಸಹ ಮಳೆ ಹಾನಿ ಕುರಿತಾಗಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ನೆರೆಯಿಂದಾಗಿ ಒಟ್ಟಾರೆ 38,000 ಕೋಟಿ ರೂಪಾಯಿಗಳ ಹಾನಿ ಆಗಿದೆ ಎಂದು ಅಂದಾಜಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿತ್ತು.

ರಾಜ್ಯ ಮತ್ತು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವೇ ಅಧಿಕಾರದಲ್ಲಿದ್ದರೂ ಕರ್ನಾಟಕದ ನೆರೆಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕಾಗಿ ಕೇಂದ್ರಸರಕಾರವು ಸಾಕಷ್ಟು ಪರಿಹಾರ ಮೊತ್ತವನ್ನು ನೀಡಿಲ್ಲ ಹಾಗೂ ರಾಜ್ಯದ ಪಾಲನ್ನು ನೀಡುವಲ್ಲಿ ಬೇಕೆಂದೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್, ಜೆಡಿಎಸ್ ಮಾತ್ರವಲ್ಲದೇ ಕೆಲವು ಬಿಜೆಪಿ ಶಾಸಕರೇ ಬಹಿರಂಗ ಅಸಮಧಾನ ತೋಡಿಕೊಂಡಿದ್ದರು.

ಮಾತ್ರವಲ್ಲದೇ ಈ ಬಾರಿಯ ಕರ್ನಾಟಕ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂಬ ಕೂಗೂ ಸಹ ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next