ರಾಮನಾಥಪುರ: ಕೇಂದ್ರ ಸರ್ಕಾರ ತಂಬಾಕು ಬೆಳೆಗಾರರ ಹಿತ ಕಾಯುತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು.
ರಾಮನಾಥಪುರ ತಂಬಾಕು ಮಾರುಕಟೆ rಯ ಫ್ಲಾಟ್ ಫಾರಂ 7 ಮತ್ತು 63ರಲ್ಲಿ ಬೇಲ್‌ಗಳಿಗೆ ಪೂಜೆ ಸಲ್ಲಿಸಿ, ಪ್ರಸಕ್ತ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ, ರೈತರನ್ನು ಉದ್ದೇಶಿಸಿಮಾತನಾಡಿದರು. ಕೇಂದ್ರ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ. ಎಪಿಎಂಸಿತಿದ್ದುಪಡಿ ಕಾಯ್ದೆ ಹಿಂದೆ ವಿದೇಶಿ ನೇರ ಬಂಡಾವಳ ಹೂಡಿಕೆ ನೀತಿ ಜಾರಿಗೊಳಿಸುವ ಸಂಚು ರೂಪಿಸಿದೆ. ಇದರಿಂದ ತಂಬಾಕುಕೊಳ್ಳುವ ಕಂಪನಿಗಳಷ್ಟೇ ಅಲ್ಲದೆ, ಬೆಳೆಗಾರರಿಗೂ ಅನ್ಯಾಯವಾಗಲಿದೆ ಎಂದು ಹೇಳಿದರು.
ರೈತರ ದಾರಿ ತಪ್ಪಿ ಲಾಗುತ್ತಿದೆ: ತಂಬಾಕು ಖರೀದಿಸಿ ಕಂಪನಿ ಮೂಲಕ ಇದೀಗ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಆದರೆ, ವಿದೇಶಿ ನೇರ ಹೂಡಿಕೆ (ಎಫ್ಡಿಐ) ನೀತಿ ಜಾರಿಯಾದರೆ ಹೊರ ದೇಶಗಳ ಬಂಡವಾಳ ಶಾಹಿಗಳ ಹಿಡಿತಕ್ಕೆ ಸಿಲುಕಿ ರೈತರು ಹಣಕ್ಕಾಗಿ ಅಲೆದಾಡುವ ಸ್ಥಿತಿ ತಲೆದೋರಲಿದೆ. ಕೇಂದ್ರ ಸರ್ಕಾರ ರೈತರನ್ನು ದಾರಿ ತಪ್ಪಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಎಸ್‌ಟಿ ಬರೆ: ಕೇಂದ್ರ ಸರ್ಕಾರ ರೈತರ ಪರ ನಿಲ್ಲುತ್ತಿಲ್ಲ, ತಂಬಾಕು ಬೆಳೆಗಾರರಿಗೆ ಅನ್ಯಾಯ ವಾಗುತ್ತಿದೆ. ರಾಜ್ಯದಿಂಂದ ಆಯ್ಕೆಯಾಗಿ 25 ಬಿಜೆಪಿ ಸಂಸದರು ಕೇಂದ್ರದಲ್ಲಿ ರಾಜ್ಯದ ರೈತರ ಪರ ಧ್ವನಿ ಎತು ¤ತ್ತಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ಕುಮಾರಸ್ವಾಮಿ 2 ಲಕ್ಷ ರೂ. ರೈತರ ಸಾಲ ಮನ್ನಾ ಮಾಡಿದರು. ಪ್ರಧಾನಿ ಮೋದಿ 2 ಸಾವಿರ ಹಣಕ್ಕಾಗಿ ರೈತರು ಬ್ಯಾಂಕ್ ಬಳಿ ಭಿಕ್ಷುಕರಂತೆ ನಿಲ್ಲಬೇಕಾಗಿದೆ. ಬಿಜೆಪಿ ಬೆಂಬಲಿಸಿದ ತಪ್ಪಿಗೆ ಜಿಎಸ್‌ಟಿ ಬರೆ ಎಳೆಯಲಾಗಿದೆ ಎಂದು ದೂರಿದರು.
ಸಾಲದ ಸುಳಿಯಲ್ಲಿ ತಂಬಾಕು ಬೆಳೆಗಾರರು: ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ದರ ನೀಡಿ ಐಟಿಸಿ ಕಂಪನಿ ತಂಬಾಕು ಬೆಳೆಗಾರರನ್ನು ಶೋಷಣೆ ಮಾಡುತ್ತಿದೆ. ಸ್ಥಿರ ಬೆಲೆಗೆ ಖರೀದಿಸದೆ ಅಪಾರ ಸಾಲ ಮಾಡಿ ತಂಬಾಕು ಉತ್ಪಾದಿಸಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಹರಾಜು ಅಧೀಕ್ಷಕರಾದ ಸಿದ್ದರಾಮು ಡಾಂಗೆ, ದೇವಾನಂದ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಹಾಗೂ ತಂಬಾಕು ಬೆಳೆಗಾರರು ಹಾಜರಿದ್ದರು.