Advertisement

ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಹಕಾರ

05:23 AM Jun 10, 2020 | Lakshmi GovindaRaj |

ಮಂಡ್ಯ: ಕೋವಿಡ್‌ 19 ಸೃಷ್ಟಿಸಿದ ತುರ್ತು ಪರಿಸ್ಥಿತಿ ವೇಳೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತೆ 27,328 ಕೋಟಿ ರೂ. ಅನು ದಾನ ಬಿಡುಗಡೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ  ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೋವಿಡ್‌ 19 ಸಂಕಷ್ಟದಲ್ಲಿ ರಾಜ್ಯಕ್ಕೆ ಉತ್ತಮ ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ಹಲವುಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ  ಅಭಿವೃದ್ಧಿಗೆ ಸಹ ಕಾರ ನೀಡಿದೆ ಎಂದರು.

Advertisement

ಬಡಜನರಿಗೆ ನೆರವು: ಜನಧನ್‌ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್‌ ಭಾರತ್‌, ಜನರಿಕ್‌ ಔಷಧ, ಹೃದಯ ಚಿಕಿತ್ಸೆಗೆ ಸ್ಟಂಟ್‌ ಅಳವಡಿಕೆ, ಬೇವು ಮಿಶ್ರಿತ ರಸಗೊಬರ ಬಳಕೆ, ಮುದ್ರಾ ಯೋಜನೆ, ಸ್ಟಾರ್ಟ್‌ಅಫ್‌ ಸೇರಿದಂತೆ ಹಲವು ಯೋಜನೆಗಳ ಮೂಲಕ ರಾಜ್ಯದ ಜನತೆಗೆ ನೆರವನ್ನು  ಒದಗಿಸಿದೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಈ ಎಲ್ಲ ಯೋಜನೆ ಗಳು ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಶ್ರೀಮಂತರು ಪಡೆಯುತ್ತಿದ್ದ ಗ್ಯಾಸ್‌ ಸಬ್ಸಿಡಿ ಬಿಡುವಂತೆ ಮಾಡಿರುವುದು ಲಕ್ಷಾಂತರ ಬಡಜನರಿಗೆ ನೆರವಾಗಿದೆ ಎಂದು ಹೇಳಿದರು.

ಪಾರದರ್ಶಕತೆಗೆ ಆದ್ಯತೆ: ಎನ್‌ಡಿಎ ನೇತೃತ್ವದ ಸರ್ಕಾರ ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಧ್ಯೇಯ ಮಂತ್ರದೊಂದಿಗೆ ಮೋದಿ ಅವರ 2ನೇ ಸರ್ಕಾರ ಕೇಂದ್ರದಲ್ಲಿ ಸ್ಥಾಪಿತಗೊಂಡಿತು. ವ್ಯವಸ್ಥೆಗಳಿಲ್ಲಿ ಸುಧಾರಣೆ, ತಂತ್ರಜ್ಞಾನ ಅಳವಡಿಕೆ ಮೂಲಕ ಹಾದಿಯ ಹೆಜ್ಜೆ ಇಡುತ್ತಿದೆ. ವ್ಯವಸ್ಥೆಗೆ ಅನುಗುಣವಾಗಿ ಒನ್‌ ನೇಷನ್‌, ಒನ್‌ ಟ್ಯಾಕ್ಸ್‌- ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌ ಜಾರಿಗೆ ತಂದರು. ಇದು ದೇಶದ ಯಾವುದೇ ಪಡಿತರ ಅಂಗಡಿಗಳಲ್ಲಿ ಪಡಿತರ  ತೆಗೆದುಕೊಳ್ಳಬಹುದು. ಒನ್‌ ಕಂಟ್ರಿ ಫಾಸ್ಟೇಜ್‌ ಸರ್ಕಾರದ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಸಂದಾಯ ಮಾಡುವ ಯೋಜನೆ ಜಾರಿಗೊಳಿಸಿ ಪಾರದರ್ಶಕತೆ ವ್ಯವಸ್ಥೆಗೆ ಒತ್ತು ನೀಡಲಾಗಿದೆ ಎಂದರು.

ಬೇಡಿಕೆ ಈಡೇರಿಕೆ: ತ್ರಿವಳಿ ತಲಾಖ್‌ ರದ್ದುಗೊಳಿಸುವ ಮೂಲಕ ಕೆಟ್ಟ ಪದ್ಧತಿಯನ್ನು ನಿರ್ಮೂಲನೆಗೊಳಿಸಿ ತಲಾಕ್‌ ಭಯದ ನೆರಳಲ್ಲಿ ಜೀವಿಸುತ್ತಿದ್ದ ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಪ್ಪಿಸಲಾಗಿದೆ.  ಸಂವಿಧಾನ 2370ನೇ ವಿಧಿ ರದ್ದುಗೊಳಿಸಿ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಇದ್ದ ವಿಶೇಷಾಧಿಕಾರ ರದ್ದು ಮಾಡಿ ಲಡಾಖ್‌ ಮತ್ತು ಜಮ್ಮು ಕಾಶ್ಮೀರ ಎಂಬ ಎರಡು ಕೇಂದ್ರಾಳಿತ ಪ್ರದೇಶಗಳ ರಚನೆ ಮಾಡಲಾಗಿದೆ.

ಬಹಳಷ್ಟು ಟೀಕೆಗಳು  ಬಂದರೂ ಅದನ್ನು ಸಮರ್ಥ ವಾಗಿ ನಿಭಾಯಿಸಲಾಗಿದೆ ಎಂದು ವಿವರಿಸಿದರು. ಕಾರ್ಪೋ ರೇಟ್‌ ತೆರಿಗೆ ಯಲ್ಲಿ ಭಾರೀ ಕಡಿತ, ರೈತರಿಗೆ ಮೂರು ಕಂತುಗಳಲ್ಲಿ 6 ಸಾವಿರ ಸಹಾಯಧನ ಸೇರಿದಂತೆ ವಿವಿಧ ಯೋಜನೆಗಳ  ನ್ನು  ರೂಪಿಸಲಾಗಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಜೆ. ವಿಜಯಕುಮಾರ್‌, ಪ್ರಧಾನ ಕಾರ್ಯದರ್ಶಿಗಳಾದ ಶಿವಲಿಂಗೇ ಗೌಡ, ಪ.ನಾ. ಸುರೇಶ್‌, ಕೆ. ಕಾಳೇಗೌಡ ಇದ್ದರು.

Advertisement

ಪ್ರಧಾನಿ ಮೋದಿಯವರು ಎಲ್ಲಕ್ಕಿಂತ ಹೆಚ್ಚು ಜನಪ್ರಿಯರಾಗಿರುವುದು ಜನತೆಯ ವಿಶ್ವಾಸ ಗಳಿಸಿರುವುದು ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಕಾರಣದಿಂದ. ಅವರ ಹೊಸ ನೀತಿ ಗಳು ಮತ್ತು ಶುದ್ಧ ಜನಪರ  ನಿರ್ಣಯಗಳು ಅವರ ಬಗೆಗಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿದೆ. 
-ಡಾ.ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next