ನವದೆಹಲಿ: ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಲಿ(ಸಿಇಎಲ್) ಅನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಸದ್ಯಕ್ಕೆ ತಡೆ ಹಿಡಿದಿದೆ.
ಖಾಸಗೀಕರಣ ವಿರೋಧಿಸಿ ನೌಕರರ ಸಂಘವು ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಈ ಹಿಂದೆ ಸಿಇಎಲ್‌ನಲ್ಲಿ ಸರ್ಕಾರದ ಶೇ.100 ಷೇರನ್ನು ಮಾರಾಟ ಮಾಡಲು ಬಿಡ್ ಕರೆದಿದ್ದಾಗ ನಂದಲ್ ಫೈನಾನ್ಸ್ ಮತ್ತು ಲೀಸಿಂಗ್ ಸಂಸ್ಥೆ ಬಿಡ್ ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ:ಅಕಾಲಿಕ ಮಳೆಗೆ ತೊಗರಿ ಇಳುವರಿ ಕುಂಠಿತ : ಕನಿಷ್ಠ ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರೈತ
210 ಕೋಟಿ ರೂ.ಗೆ ಷೇರು ಖರೀದಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಇದೀಗ ಅದರ ಬಗ್ಗೆ ನೌಕರರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖಾಸಗೀಕರಣವನ್ನು ಸದ್ಯದ ಮಟ್ಟಿಗೆ ತಡೆ ಹಿಡಿಯಲಾಗಿದೆ ಎಂದು ಸಿಇಎಲ್ ಖಾಸಗೀಕರಣ ಪ್ರಕ್ರಿಯೆ ನಡೆಸುತ್ತಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿಗಳಾದ ತುಹಿನ್ ಕಾಂತಾ ಪಾಂಡೆ ತಿಳಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಸಿಇಎಲ್ ಖಾಸಗೀಕರಣ ನಡೆಯುವುದರಲ್ಲಿತ್ತು.