Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಸಭೆ ನಡೆದಿತ್ತು.1947ರಲ್ಲಿ ದೇಶ ವಿಭಜನೆಯ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗಮಿಸಿ ಜಮ್ಮುವಿನಲ್ಲಿ ನೆಲೆ ಕಂಡುಕೊಂಡ ಕುಟುಂಬಗಳಿಗೆ ಈ ಹಿಂದೆ 2016ರಲ್ಲಿ ಕೇಂದ್ರ ಸರಕಾರವು ಪರಿಹಾರ ನೀಡಿತ್ತು. ಆದರೆ ದೇಶದ ಇತರ ಭಾಗಗಳಲ್ಲಿ ನೆಲೆ ಕಂಡುಕೊಂಡವರಿಗೆ ಈ ಪರಿಹಾರ ಲಭ್ಯವಾಗಿರಲಿಲ್ಲ. ಜಮ್ಮುವಿನಲ್ಲಿ ಸುಮಾರು 26,319 ಕುಟುಂಬಗಳಿದ್ದರೆ, ದೇಶದ ಇತರ ಭಾಗಗಳಲ್ಲಿ ಒಟ್ಟು 5300 ಕುಟುಂಬಗಳಿವೆ. ಇದೆ ರೀತಿ 1965 ಮತ್ತು 1971ರ ಯುದ್ಧದ ಸಮಯದಲ್ಲೂ 10 ಸಾವಿರ ಕುಟುಂಬಗಳು ನಿರಾಶ್ರಿತವಾಗಿದ್ದವು.
ಅವಧಿ ವಿಸ್ತರಣೆ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರು ವಾರ್ಷಿಕ 6 ಸಾವಿರ ರೂ. ಸಹಾಯಧನ ಪಡೆಯುವುದಕ್ಕಾಗಿ ಆಧಾರ್ ಜೋಡಣೆ ಮಾಡಲು ನ.30ರ ವರೆಗೆ ಕಾಲಾವಕಾಶವನ್ನು ಸರಕಾರ ನೀಡಿದೆ. ಈ ಯೋಜನೆ ಅಡಿಯಲ್ಲಿ ಆಗಸ್ಟ್ 1 ರಿಂದಲೇ ಆಧಾರ್ ಜೋಡಣೆ ಕಡ್ಡಾಯ ವಾಗಿತ್ತು. ಆದರೆ ಈ ಅವಧಿಯನ್ನು ನವೆಂಬರ್ 30ರ ವರೆಗೆ ಕೇಂದ್ರ ಸರಕಾರ ಮುಂದೂಡಿದೆ. ಈಗಾಗಲೇ ಈ ಯೋಜನೆ ಅಡಿಯಲ್ಲಿ 7 ಕೋಟಿ ರೈತರಿಗೆ ಸಹಾಯ ಧನ ಲಭ್ಯವಾಗಿದೆ.