Advertisement

ವಿಲೀನ ವಿರುದ್ಧ ತೆಲುಗು ಭಾಷಿಗರ ಅಸಮಾಧಾನ

12:53 AM Sep 01, 2019 | Team Udayavani |

ಅಮರಾವತಿ: ಆಂಧ್ರ ಬ್ಯಾಂಕನ್ನು ಯೂನಿಯನ್‌ ಹಾಗೂ ಕಾರ್ಪೊರೇಷನ್‌ ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ತೆಲುಗು ಭಾಷಿಗರು ತೀವ್ರವಾಗಿ ವಿರೋಧಿಸಿದ್ದಾರೆ.

Advertisement

ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್ನಿತರ ಜಾಲತಾಣಗಳ ಮೂಲಕ ತನ್ನ ಅಸಮಾಧಾನ ಹೊರಹಾಕಿರುವ ಅವರು, “”ವಿಲೀನ ಪ್ರಕ್ರಿಯೆಯು ತೆಲುಗು ಭಾಷಿಗರ ಹೆಮ್ಮೆಯ ಪ್ರತೀಕವಾಗಿದ್ದ ಬ್ಯಾಂಕ್‌ ಅಸ್ತಿತ್ವವನ್ನು ಇಲ್ಲವಾಗಿಸುತ್ತದೆ” ಎಂದು ಬೇಸರಿಸಿದ್ದಾರೆ. ವೈಎಸ್‌ಆರ್‌ಸಿ ಸಂಸದ ವಿ. ಬಾಲಶೋವರಿ, ವಿಲೀನದ ವಿರುದ್ಧ ಪ್ರಧಾನಿ ಮೋದಿ ಹಾಗೂ ಸಚಿವೆ ನಿರ್ಮಲಾ ಅವರಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next