Advertisement
ಕಾನೂನಿನ ಸಮ್ಮತಿ ಇದೆಯೇ?ಕೇಂದ್ರ ಸರಕಾರದ ಪ್ರಕಾರ ಹೊಟೆಧೀಲ್‌ಗಳಲ್ಲಿ ಸೇವಾಶುಲ್ಕ ವಿಧಿಸುವುದು ಅಪರಾಧ. ಈ ಶುಲ್ಕದಿಂದಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದೂ ಅದು ಹೇಳುತ್ತದೆ. ಈ ಸಂಬಂಧ ಕಾನೂನಿನಲ್ಲಿ ಯಾವುದೇ ಉಲ್ಲೇಖವಿಲ್ಲವಾದರೂ ಮುಂದೆ ತರುತ್ತೇವೆ ಎಂದು ಕೇಂದ್ರ ಹೇಳುತ್ತಿದೆ.
ಗ್ರಾಹಕರ ದೂರಿನ ಮೇರೆಗೆ ಇತ್ತೀಚೆಗಷ್ಟೇ ಕೇಂದ್ರ ಸರಕಾರ, ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದ ಜತೆಗೆ ಒಂದು ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಧೀಲ್‌ಗಳಲ್ಲಿ ವಿಧಿಸಲಾಗುತ್ತಿರುವ ಸೇವಾಶುಲ್ಕದ ಬಗ್ಗೆ ಚರ್ಚೆಯಾಗಿದೆ. ಸದ್ಯ ಗ್ರಾಹಕರಿಗೆ ವಿಧಿಸಲಾಗುವ ಬಿಲ್‌ಗೆ ಶೇ.10ರಷ್ಟು ಸೇವಾ ಶುಲ್ಕ ವಿಧಿಸಿ ವಸೂಲಿ ಮಾಡಿಕೊಳ್ಳಲಾಗುತ್ತಿದೆ. ಇದು ತಪ್ಪು ಎಂದಿದೆ. ಹೊಟೇಲ್‌ಗಳವರ ವಾದವೇನು?
ಸೇವಾಶುಲ್ಕಕ್ಕೆ ಸಂಬಂಧಿಸಿದಂತೆ ಸದ್ಯ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ಒಮ್ಮೆ ಸರಕಾರ ಕಾನೂನು ಜಾರಿ ಮಾಡಿದ ಮೇಲೆ ಇದು ಸರಿಯೋ ಅಥವಾ ತಪ್ಪೋ ಎಂಬುದು ನಿರ್ಧಾರವಾಗುತ್ತದೆ. ಅಲ್ಲಿಯವರೆಗೆ ಸೇವಾಶುಲ್ಕ ವಿಧಿಸುವುದು ಕಾನೂನು ಪ್ರಕಾರ ಸರಿಯಾಗಿಯೇ ಇದೆ ಎಂದು ಹೊಟೇಲ್ ಮಾಲಕರು ಹೇಳುತ್ತಾರೆ. ಅಲ್ಲದೆ ಈಗಾಗಲೇ ಕೊರೊನಾ ಸಮಸ್ಯೆಯಿಂದ ನಾವು ನಲುಗಿದ್ದೇವೆ. ಈಗ ಸೇವಾಶುಲ್ಕದ ವಿಚಾರದಲ್ಲಿ ಹೊಟೇಲ್‌ನವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಸೇವಾಶುಲ್ಕದಿಂದಾಗಿಯೇ ಸಿಬಂದಿ ಉತ್ತಮ ವೇತನ ಮತ್ತು ಪ್ರೋತ್ಸಾಹಕ ಧನ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.
Related Articles
ಕೇಂದ್ರ ಸರಕಾರ ಹೇಳುವ ಪ್ರಕಾರ, ಸೇವಾಶುಲ್ಕ ನೀಡುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಒಂದು ವೇಳೆ ಗ್ರಾಹಕ ತಾನು ಸೇವಾಶುಲ್ಕ ನೀಡಲ್ಲ ಎಂದರೆ ಬಲವಂತವಾಗಿ ಪಡೆದುಕೊಳ್ಳುವಂತಿಲ್ಲ. ಆತ ಇಚ್ಚಿಸಿದರೆ ಮಾತ್ರ ಪಡೆಯಬಹುದು ಎಂದಿದೆ. 2017ರಲ್ಲೇ ಈ ಸಂಬಂಧ ನಿಯಮ ಜಾರಿಯಾಗಿದೆ.
Advertisement