ಟೆಲ್ ಅವಿವ್: ಗಾಜಾ ಪಟ್ಟಿಯಲ್ಲಿ ವಾಯು ದಾಳಿ ಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಖಾನ್ ಯೂನಿಸ್ ಸೇರಿದಂದೆ ಕೇಂದ್ರ ಗಾಜಾ ಪ್ರದೇಶದಲ್ಲಿ ಹಮಾಸ್ ಉಗ್ರರ ವಿರುದ್ಧ ಶುಕ್ರವಾರ ರಾತ್ರಿ ಆರಂಭವಾದ ವಾಯು ದಾಳಿಯಿಂದ ಕಳೆದ 24 ಗಂಟೆಗಳಲ್ಲಿ ಕನಿಷ್ಠ 200 ಮಂದಿ ಪ್ಯಾಲೇಸ್ತೀನಿಯರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನೊಂದೆಡೆ, ಕೇಂದ್ರ ಗಾಜಾದ ನುಸಿರಾತ್ ಪ್ರದೇಶದ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಸರಣಿ ಬಾಂಬ್ ದಾಳಿ ಗಳನ್ನು ಮಾಡಿದವು. ಇದರಿಂದ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಅಲ್ಲದೇ ಅಲ್- ಬುರೇಜಿ ಮತ್ತು ಮಘಜಿ ಪ್ರದೇಶಗಳ ಮೇಲೆ ಶನಿ ವಾರ ಇಸ್ರೇಲ್ ಸೇನೆ ವಾಯು ದಾಳಿ ನಡೆಸಿ ದೆ. ಇಸ್ರೇಲ್ ಪಡೆಗಳು ಮುನ್ನುಗ್ಗುತ್ತಿದ್ದು, ಗಾಜಾ ಪಟ್ಟಿಯನ್ನು ಹಂತ-ಹಂತವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ.
ಸುರಂಗ ಸಂಕೀರ್ಣ ಧ್ವಂಸ: ಗಾಜಾ ನಗರದಲ್ಲಿರುವ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮನೆಯ ಅಡಿಯಲ್ಲಿದ್ದ ಸುರಂಗ ಸಂಕೀರ್ಣ ವನ್ನು ಇಸ್ರೇಲ್ ಸೇನೆಯು ಧ್ವಂಸಗೊಳಿಸಿವೆ.
ಇಸ್ರೇಲ್-ಹಮಾಸ್ ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 21,500ಕ್ಕೂ ಹೆಚ್ಚು ಪ್ಯಾಲೇ ಸ್ತೀನಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಮೆರಿಕದಿಂದ ಶಸ್ತ್ರಾಸ್ತ್ರ ಮಾರಾಟ: ಈ ನಡುವೆ, ಇಸ್ರೇಲ್‌ಗೆ 147.5 ಮಿಲಿಯನ್ ಡಾಲರ್ (1, 227 ಕೋಟಿ ರೂ.) ಮೊತ್ತದ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ತಿಳಿಸಿದ್ದಾರೆ.