Advertisement

ಇಂದು ಕೇಂದ್ರ ಬಜೆಟ್ : ಆರ್ಥಿಕತೆಗೆ ಲಸಿಕೆ ನೀಡುವರೇ ನಿರ್ಮಲಾ?

08:23 AM Feb 01, 2021 | Team Udayavani |

ಕೋವಿಡ್ ನಿಂದಾಗಿ ದೇಶದ ಆರ್ಥಿಕತೆಯು ತಾಂತ್ರಿಕ ಹಿಂಜರಿತ ಅನುಭವಿಸುತ್ತಿರುವಂತೆಯೇ “ಬಜೆಟ್‌ ದಿನ’ ಬಂದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಬೆಳಗ್ಗೆ ಆಯವ್ಯಯ ಮಂಡಿಸಲಿದ್ದಾರೆ. ಕೊರೊನಾದಿಂದ ಕಂಗಾಲಾದ ದೇಶದ ಆರ್ಥಿಕತೆಗೆ “ಲಸಿಕೆ’ ನೀಡುವ ನಿರೀಕ್ಷೆ ಹುಟ್ಟಿಸಿದ್ದಾರೆ.

Advertisement

– ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ.
– ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ ಸತತ 3ನೇ ಬಜೆಟ್‌.
– ಇದು ಮೋದಿ ನೇತೃತ್ವದ ಸರಕಾರದ 9ನೇ ಬಜೆಟ್‌.

ನೇರಪ್ರಸಾರ
ಲೋಕಸಭಾ ಟಿವಿ, ದೂರದರ್ಶನ, ರಾಜ್ಯಸಭಾ ಟಿವಿ, ಪಿಐಬಿ ಮತ್ತು ಇವುಗಳ ಯೂಟ್ಯೂಬ್‌ ಚಾನೆಲ್‌ಗ‌ಳಲ್ಲಿ ಬಜೆಟ್‌ ಮಂಡನೆ ನೇರ ಪ್ರಸಾರಗೊಳ್ಳಲಿದೆ.

ನಿರೀಕ್ಷೆಗಳೇನು?
– ಉದ್ಯೋಗಾವಕಾಶ ಸೃಷ್ಟಿಗೆ ಒತ್ತು, ಗ್ರಾಮೀಣಾಭಿವೃದ್ಧಿಗೆ ಆದ್ಯತೆ.
– ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ. ವಿದೇಶಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಈಗಿರುವ ನಿಯಮಗಳ ಸಡಿಲಿಕೆ.
– ತೆರಿಗೆದಾರರ ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ.

ಈ ಬಾರಿಯ ವೈಶಿಷ್ಟ್ಯ
– ಮೊದಲ ಬಾರಿಗೆ ಬಜೆಟ್‌ ಪ್ರತಿಗಳ ಮುದ್ರಣವಿಲ್ಲ.
– ಮುಂಗಡ ಪತ್ರದ ಎಲ್ಲ ಅಂಶಗಳೂ “ಯೂನಿಯನ್‌ ಬಜೆಟ್‌ ಆ್ಯಪ್‌’ನಲ್ಲಿ ಲಭ್ಯ.

Advertisement

ಫೇಸ್‌ ಬುಕ್‌ ಲೈವ್‌
ಅಪರಾಹ್ನ 3 ಗಂಟೆಗೆ ಉದ್ಯಮಿ ಡಾ| ಜೆ. ಆರ್‌. ಬಂಗೇರ ಅವರು ಉದಯವಾಣಿ ಫೇಸ್‌ಬುಕ್‌ ಪೇಜ್‌ನಲ್ಲಿ ಬಜೆಟ್‌ ವಿಶ್ಲೇಷಣೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next