Advertisement
ಉಜ್ವಲ ಗುರಿ ಎಂಟು ಕೋಟಿಗೆ ಇತ್ತೀಚೆಗೆ ಉಜ್ವಲ ಯೋಜನೆ ಜಾರಿಗೊಂಡಾಗ, 5 ಕೋಟಿ ಬಡವರ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ಹೊಂದಲಾಗಿತ್ತು. ಈ ಯೋಜನೆಗೆ ಅಪಾರ ಮಟ್ಟದಲ್ಲಿ ಜನ ಸ್ಪಂದನೆ ಬಂದಿರುವುದರಿಂದ ಇದೀಗ, ಆ ಗುರಿಯನ್ನು 8 ಕೋಟಿ ಮನೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
“ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯಡಿ ಆರಂಭಿಸಲಾಗಿದ್ದ “ಸುಕನ್ಯಾ ಸಮೃದ್ಧಿ ಯೋಜನೆ’ಯಡಿ 2017ರ ನವೆಂಬರ್‌ವರೆಗೆ 1.26 ಕೋಟಿ ಖಾತೆಗಳು ತೆರೆಯಲಾಗಿದ್ದು, 19, 183 ಕೋಟಿ ರೂ. ಹಣ ಠೇವಣಿ ರೂಪದಲ್ಲಿ ಜಮೆಯಾಗಿದೆ.